ಕಾರ್ಕಳ,ಏ.19: ಕಾರ್ಕಳ ಕಾಂಗ್ರೆಸ್ ರಾಜಕೀಯದಲ್ಲಿ ಉಂಟಾದ ಭಿನ್ನಮತ ಬೆಳವಣಿಗೆಯಲ್ಲಿ ಪ್ರತಿಭಟನಾ ಸಂದರ್ಭದಲ್ಲಿ ಪ್ರತಿಕೃತಿ ದಹನಕ್ಕೆ ವಿಫಲ ಯತ್ನ ಹಾಗೂ ಫೇಸ್ಬುಕ್ ವಾಟ್ಸ್ಪ್ಗಳಲ್ಲಿ ಅವಹೇಳನಕಾರಿ ಬರಹದ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರಿಸಿ ಮಾಜಿ ಶಾಸಕ ಹೆಚ್.ಗೋಪಾಲ ಬಂಡಾರಿ ಕಣ್ಣೀರು ಸುರಿಸಿದ ಘಟನಾವಳಿ ನಡೆದಿದೆ.
ತನ್ನ ಕಚೇರಿಯಲ್ಲಿ ಆಯೋಜಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವ್ಯಕ್ತಿಯ ಮಾನ ಹಾನಿಮಾಡುವುದು ರಾಜಕೀಯವಾಗಬಾರದು. ಇಂತಹ ಕಹಿ ಅನುಭವವು ಈ ಹಿಂದೆಯೂ ಆಗಿತ್ತು. ಹೆಬ್ರಿ ಸುಚೇತಾ ಕೊಲೆ ಘಟಿಸಿದಾಗ ನನ್ನ ಹಾಗೂ ನನ್ನ ಕುಟುಂಬವನ್ನು ಮುಂದಿಟ್ಟು ರಾಜಕೀಯ ಮಾಡಿದ ಅವರು ಶಾಸಕತ್ವ ಅವಧಿಯಲ್ಲಿಯೇ ಆ ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕಲಾಗಿತ್ತು ರಾಜಕೀಯಯ ಸ್ವಾರ್ಥಕ್ಕೆ ಯಾರ್ಯಾರೋ ಮೇಲೆ ಗೂಬೆ ಹೊರಿಸುವುದು ತರವಲ್ಲ ಎಂದು ಅವರು ಹೇಳಿದರು.