ಕುಂದಾಪುರ, ಏ 20: ಖರ್ಚಿಗಾಗಿ ಚಿನ್ನದ ಸರ ನೀಡಲಿಲ್ಲ ಎನ್ನುವ ಕಾರಣಕ್ಕಾಗಿ ವಯೋವೃದ್ಧ ಅಜ್ಜ-ಅಜ್ಜಿ ಹಾಗೂ ಚಿಕ್ಕಮ್ಮನಿಗೆ ಮಾರಣಾಂತಕ ಹಲ್ಲೆ ನಡೆಸಿದ್ದಲ್ಲದೆ ಲಕ್ಷಾಂತರ ರೂಪಾಯಿ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದ ಆರೋಪಗಳನ್ನು ಎದುರಿಸುತ್ತಿದ್ದ ರಂಜಿತ್ಶೆಟ್ಟಿ ಎಂಬಾತನ ವಿರುದ್ದ ಮಾಡಲಾಗಿರುವ ಆರೋಪಗಳು ಸಾಬೀತಾಗಿದ್ದು, ಎ.24 ರಂದು ಅಪರಾಧಿಗೆ ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ಗುರುವಾರ ಕುಂದಾಪುರದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕಾಶ್ಖಂಡೇರಿ ತೀರ್ಪು ಪ್ರಕಟಿಸಿದ್ದಾರೆ.
ಅಂದಿನ ಕುಂದಾಪುರ ಪೊಲೀಸ್ಠಾಣಾ ವ್ಯಾಪ್ತಿಯ ಕೊರ್ಗಿ ಹೊಸ್ಮಠ ಸಮೀಪದ ಕುಷ್ಟಪ್ಪ ಶೆಟ್ಟಿ, ಕೊರಗಮ್ಮ ಶೆಡ್ತಿ ಹಾಗೂ ಅವರ ಪುತ್ರಿ ಚಂದ್ರಮತಿ ಶೆಟ್ಟಿ ಇದ್ದ ಮನೆಗೆ 2016 ರ ಜ.5 ರಂದು ಮಧ್ಯರಾತ್ರಿ 1.30 ರ ವೇಳೆಯಲ್ಲಿ ಮಾರಕಾಯುಧಗಳೊಂದಿಗೆ ಮನೆಗೆ ನುಗ್ಗಿದ್ದ ಕುಷ್ಟಪ್ಪ ಶೆಟ್ಟಿ ಹಾಗೂ ಕೊರಗಮ್ಮ ಶೆಡ್ತಿ ಅವರ ಹಿರಿಯ ಪುತ್ರಿಯ ಮಗ ರಂಜಿತ್ಶೆಟ್ಟಿ ತನ್ನ ಖರ್ಚಿಗಾಗಿ ಚಿನ್ನದ ಒಡವೆಗಳನ್ನು ಕೊಡಲು ಬೇಡಿಕೆ ಇಟ್ಟಿದ್ದಾನೆ. ಮನೆಯವರು ಕೊಡಲು ನಿರಾಕರಿಸಿದ್ದರಿಂದ ಮರದ ಒನಕೆ ಹಾಗೂ ಮಾರಕಾಯುಧಗಳಿಂದ ಮೂವರ ಮೇಲೂ ಮನಬಂದಂತೆ ಹಲ್ಲೆ ನಡೆಸಿ ಮನೆಯಲ್ಲಿ ಇದ್ದ ತನ್ನ ತಾಯಿಯ ಒಡವೆಯೂ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಒಡವೆಗಳನ್ನು ದೋಚಿಕೊಂಡು ಪರಾರಿಯಾಗಿದ್ದ.
ಮನೆಯಲ್ಲಿ ನಡೆಯಲಿದ್ದ ಸಮಾರಂಭಕ್ಕೆಂದು ಪುನಾದಿಂದ ಊರಿಗೆ ಬಂದಿದ್ದ ನಾರಾಯಣ ಶೆಟ್ಟಿ ಎನ್ನುವವರು ಕುಷ್ಟಪ್ಪ ಶೆಟ್ಟಿಯವರ ಮನೆ ಒಳ ಹೊಕ್ಕಾಗ ಧಾರುಣ ಘಟನೆ ಬೆಳಕಿಗೆ ಬಂದಿತ್ತು. ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪ್ರಕರಣವನ್ನು ದಾಖಲಿಸಿಕೊಂಡಿದ್ದ ಕುಂದಾಪುರದ ಅಂದಿನ ಅಪರಾಧ ವಿಭಾಗದ ಎಸ್.ಐ ದೇವರಾಜ್ಹಾಗೂ ಸಿಬ್ಬಂದಿಗಳು ಘಟನೆ ನಡೆದ ಕೆಲವೇ ಗಂಟೆಗಳ ಒಳಗೆ ಆರೋಪಿಯನ್ನು ಕೋಟೇಶ್ವರದಲ್ಲಿ ಚಿನ್ನಾಭರಣಗಳೊಂದಿಗೆ ಬಂಧಿಸಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಸರ್ಕಲ್ಇನ್ಸ್ಪೆಕ್ಟರ್ಪಿ.ಎಂ.ದಿವಾಕರ ಆರೋಪಿಯ ವಿರುದ್ದ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಜಿಲ್ಲಾ ಸರ್ಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು ಪ್ರಾಸಿಕ್ಯೂಶನ್ಪರವಾಗಿ ವಾದಿಸಿದ್ದರು.