ಮೂಡುಬಿದಿರೆ, ಏ 20: ಮೂಲ್ಕಿ ಮೂಡುಬಿದಿರೆ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದು ಟಿಕೆಟ್ ಸಿಗದೆ ಪಕ್ಷದ ಹಿರಿಯ ಮುಖಂಡರ ವಿರುದ್ಧ ಅಸಮಾಧಾನಗೊಂಡಿದ್ದ ಹಿರಿಯ ಮುಖಂಡ ಜಗದೀಶ್ ಅಧಿಕಾರಿ ಇದೀಗ ಮತ್ತೆ ಬಿಜೆಪಿಯಲ್ಲಿ ಸಕ್ರಿಯರಾಗಿ ಉಮಾನಾಥ್ ಕೋಟ್ಯಾನ್ ಗೆಲುವಿಗೆ ದುಡಿಯುವುದಾಗಿ ಹೇಳಿದ್ದಾರೆ.
ಇಂದು ಬೆಳಿಗ್ಗೆ ಉಮಾನಾಥ ಕೋಟ್ಯಾನ್ ಮತ್ತು ಜಗದೀಶ್ ಅಧಿಕಾರಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ನಾವಿಬ್ಬರೂ ಒಗ್ಗಟ್ಟಾಗಿದ್ದು, ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಶಕ್ತಿಮೀರಿ ಪ್ರಯತ್ನಿಸುವುದಾಗಿ ಹೇಳಿದ್ದಾರೆ.
ನಾನು ಮೂಡುಬಿದಿರೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು ನಿಜ. ಅದು ಸಿಗದೇ ಇದ್ದಾಗ ಸಹಜವಾಗಿ ಅಸಮಾಧಾನಗೊಂಡು ಅಶಿಸ್ತು ಪ್ರದರ್ಶಿಸಿದ್ದು ನಿಜ. ಮುಂದೆ ಯಾವುದೇ ರೀತಿಯ ಗೊಂದಲವಾಗುವುದಿಲ್ಲ. ಸಾಯುವವರೆಗೂ ಬಿಜೆಪಿ ಪಕ್ಷದಲ್ಲಿರುತ್ತೇನೆ. ಅಲ್ಲದೆ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಗೆಲುವಿಗೆ ಶ್ರಮಿಸುತ್ತೇನೆ. ನನಗೆ ಹಾಗೂ ನಮ್ಮ ಪಕ್ಷಕ್ಕೆ ಎದುರಾಳಿ ಅಭಯಚಂದ್ರ ಜೈನ್ ಮಾತ್ರ ಎಂದು ಸುದ್ದಿಗೋಷ್ಠಿಯಲ್ಲಿ ಜಗದೀಶ್ ಅಧಿಕಾರಿ ಹೇಳಿದ್ದಾರೆ.