ಉಳ್ಳಾಲ, ಏ 20: ಗ್ಯಾಸ್ ವೆಲ್ಡಿಂಗ್ ಕಟ್ಟರ್ ಸಿಲಿಂಡರ್ ಸ್ಪೋಟಗೊಂಡು ಇಬ್ಬರು ಗಂಭೀರ ಗಾಯಗೊಂಡ ಘಟನೆ ಉಳ್ಳಾಲದ ಚೆಂಬುಗುಡ್ಡೆ ಮಸೀದಿ ಬಳಿ ನಡೆದಿದೆ.
ಘಟನೆಯಿಂದ ಒಬ್ಬಾತ ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಗ್ಯಾರೇಜಲ್ಲಿ ಆಕಸ್ಮಿಕವಾಗಿ ಗ್ಯಾಸ್ ವೆಲ್ಡಿಂಗ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಕಾರ್ಮಿಕರಾದ ಲತೀಶ್ (55) ಹಾಗೂ ನವೀನ್ ಆಚಾರಿ (30) ಗಂಭೀರ ಗಾಯಗೊಂಡರು. ಅರ್ಫಾಣ್ (22) ಎಂಬಾತನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಮೂವರನ್ನೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.