ಮಂಗಳೂರು, ಏ 20: ನಗರದ ಹಳೆಬಂದರಿನಲ್ಲಿ ತೇಲುವ ರೆಸ್ಟೋರೆಂಟ್ ಎಂದೇ ಕರೆಯಲಾಗುವ ಕ್ರೂಸ್ ಆಂಡ್ ಡೈನ್ ರೆಸ್ಟೋರೆಂಟ್ಗೆ ಬುಧವಾರ ರಾತ್ರಿ ಸಿಡಿಲು ಬಡಿದು ಹಾನಿಯಾಗಿದ್ದು, ಭಾಗಶಃ ಮುಳುಗಿದೆ ಎಂದು ತಿಳಿದು ಬಂದಿದೆ.
ನೀರಿನಲ್ಲಿ ತೇಲಾಡುವ ರೆಸ್ಟೋರೆಂಟ್ ಒಳಗೊಂಡಿರುವ ಬೋಟ್ ಮಂಗಳೂರಿನ ಚರಣ್ ಎಂಬವರಿಗೆ ಸೇರಿದೆ ಎಂದು ಹೇಳಲಾಗಿದೆ.
ಧಕ್ಕೆಯ ಬಳಿ ನೀರಿನಲ್ಲಿರುವ ಈ ಬೋಟ್ ಮೀನುಗಾರಿಕೆಗೆ ಬಳಕೆಯಾಗದೆ, ಇದರಲ್ಲಿ ರೆಸ್ಟೋರೆಂಟ್ ನಡೆಸಲಾಗುತ್ತಿದೆ. ಬುಧವಾರ ರಾತ್ರಿ ಸಿಡಿಲು, ಮಿಂಚು ಸಹಿತ ಮಳೆ ಸುರಿದಿದ್ದು, ಸಿಡಿಲು ಬಡಿದು ರೆಸ್ಟೋರೆಂಟ್ಗೆ ಹಾನಿ ಸಂಭವಿಸಿದೆ ಎಂದು ಹೇಳಲಾಗಿದೆ.