ಕಾಸರಗೋಡು, ಜು. 31 (DaijiworldNews/SM): ಜಿಲ್ಲೆಯಲ್ಲಿ ಆದಿತ್ಯವಾರ 52 ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಪೈಕಿ 47 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ಮೂವರು ಹೊರರಾಜ್ಯ ಹಾಗೂ ಇಬ್ಬರು ವಿದೇಶ ದಿಂದ ಬಂದವರಾಗಿದ್ದಾರೆ.

ಕುಂಬಳೆಯ 9 ಮಂದಿ, ಪುತ್ತಿಗೆಯ 6 ಮಂದಿ, ಮಂಗಲ್ಪಾಡಿಯ 8 ಮಂದಿ, ಕಾಸರಗೋಡಿನ 10 ಮಂದಿ, ಪುಲ್ಲೂರು ಪೆರಿಯ, ಪಳ್ಳಿಕೆರೆ ತಲಾ ಮೂವರು, ವರ್ಕಾಡಿ, ಕಳ್ಳಾರ್, ಚೆಂಗಳ, ಕುಂಬ್ಡಾಜೆಯ ತಲಾ ಇಬ್ಬರು, ಪೈವಳಿಕೆ ಕುತ್ತಿಕೋಲು, ಬೆಳ್ಳೂರು, ನೀಲೇಶ್ವರ, ಮಡಿಕೈನ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಶುಕ್ರವಾರ 129 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ 615 ಮಂದಿ ಚಿಕಿತ್ಸೆಯಲ್ಲಿದ್ದಾರೆ. ಜಿಲ್ಲೆಯಲ್ಲಿ 3521 ಮಂದಿ ನಿಗಾದಲ್ಲಿದ್ದು, ಈ ಪೈಕಿ 1028 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.