ಕಾಸರಗೋಡು, ಆ. 01 (DaijiworldNews/MB) : ಐವರು ವ್ಯಕ್ತಿಗಳೊಂದಿಗೆ ತನ್ನ 16 ವರ್ಷದ ಮಗಳ ಮೇಲೆಯೇ ನಿರಂತರವಾಗಿ ಸಾಮೂಹಿಕ ಅತ್ಯಾಚಾರ ಮಾಡಿದ ಮದರಸಾ ಶಿಕ್ಷಕ ಮಗಳು ಗರ್ಭಿಣಿಯಾದ ಬಳಿಕ ಭ್ರೂಣ ಮಣ್ಣಿನಡಿ ಹೂತ್ತಿಟ್ಟಿದ್ದು ಕಾಸರಗೋಡಿನ ನೀಲೇಶ್ವರ ಠಾಣೆಯ ಪೊಲೀಸರಿಗೆ ಇದು ಪತ್ತೆಯಾಗಿದೆ.

ಆರೋಪಿ 50 ವರ್ಷದ ಮದರಸಾ ಶಿಕ್ಷಕ ತನ್ನ ಮಗಳ ಮೇಲೆ ಇತರೆ ಐವರು ಆರೋಪಿಗಳಾದ ಮೊಹಮ್ಮದ್ ರಿಯಾಸ್, ಮೊಹಮ್ಮದ್ ಶರೀಪ್, ಅಹ್ಮದ್, ಇಜಾಸ್ ಮತ್ತು ಮಹಮ್ಮದ್ ಅಲಿ ಅವರೊಂದಿಗೆ ಸೇರಿ ಸುಮಾರು ಎರಡು ವರ್ಷಗಳವರೆಗೆ ಅತ್ಯಾಚಾರ ಮಾಡಿದ್ದು ಈ ಬಗ್ಗೆ ಬಾಲಕಿ ತನ್ನ ಸೋದರ ಮಾವನೊಂದಿಗೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈ ಘಟನೆ ಜುಲೈ 19ರಂದು ಬೆಳಕಿಗೆ ಬಂದಿದ್ದು ಈಗಾಗಲೇ ಅಪ್ರಾಪ್ತ ಬಾಲಕನ ಮೇಲೆಯೂ ಲೈಂಗಿಕ ದೌರ್ಜನ್ಯ ಮಾಡಿದ ಪ್ರಕರಣ ದಾಖಲಾಗಿರುವ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು ಮಗಳು ಗರ್ಭ ಧರಿಸಿದ್ದ ಕಾರಣ ಭ್ರೂಣವನ್ನು ಹತ್ಯೆ ಮಾಡಿ ಅದನ್ನು ಮಣ್ಣಿನಡಿಯಲ್ಲಿ ಹೂತ್ತಿದ್ದೆವು ಎಂದು ತಿಳಿಸಿದ್ದಾನೆ.
ಇದೀಗ ಸಾಕ್ಷ್ಯಾಧಾರವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದ್ದು, ಐದು ಮಕ್ಕಳ ತಂದೆಯಾಗಿರುವ ಆರೋಪಿಯ ವಿರುದ್ಧ ಅಕ್ರಮ ಭ್ರೂಣಹತ್ಯೆ ಆರೋಪಪೊಕ್ಸೊ, ಬಾಲಾಪರಾಧಿ ನ್ಯಾಯ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆ ಸೇರಿದಂತೆ ವಿವಿಧ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಾಗೆಯೇ ಇತರೆ ಐವರನ್ನು ಕೂಡಾ ಬಂಧಿಸಲಾಗಿದೆ.
ಇನ್ನು ತಾಯಿಯು ಕೂಡಾ ಈ ಪ್ರಕರಣದಲ್ಲಿ ಭಾಗಿಯಾಗಿರುವ ಸಾಧ್ಯತೆಯಿದ್ದು ತನಿಖೆ ನಡೆಸಲಾಗುತ್ತಿದೆ. ಆಕೆಯ ಬಂಧನ ಮಾಡಿಲ್ಲ ಎಂದು ನೀಲೇಶ್ವರ ಠಾಣಾ ಪೊಲೀಸರು ತಿಳಿಸಿದ್ದಾರೆ.
2017ರಲ್ಲಿ ಮದರಸಾ ಶಿಕ್ಷಕ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು ಈ ಬಗ್ಗೆ ಬೆಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಯಾಗಿರುವ ಈತ ಕಾಸರಗೋಡಿಗೆ ಮದರಸಾ ಬೋಧನೆಗಾಗಿ ಬಂದಿದ್ದ. ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕಣದಲ್ಲಿ ಜಾಮೀನು ಪಡೆದಿದ್ದಾನೆ.