ಕಾಸರಗೋಡು, ಆ. 01 (DaijiworldNews/MB) : ಜಿಲ್ಲೆಯಲ್ಲಿ ಶನಿವಾರ 153 ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಪೈಕಿ 151 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ. 28 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಶನಿವಾರ ಮಧೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅತ್ಯಧಿಕ ಅಂದರೆ 23 ಜನರಿಗೆ ಸೋಂಕು ದೃಢಪಟ್ಟಿದ್ದು, ಕುಂಬಳೆ ಮತ್ತು ಮಂಗಲ್ಪಾಡಿ 18, ಚೆಂಗಳ 12 ಮಂದಿಗೆ ಸೋಂಕು ಪಾಸಿಟಿವ್ ಆಗಿದೆ. ಉಳಿದಂತೆ ಮೀಂಜ 4, ಎಣ್ಮಕಜೆ, ಪುಲ್ಲೂರು ಪೆರಿಯ, ಕುತ್ತಿಕೋಲ್, ಕಾಞಂಗಾಡ್, ಬೇಡಡ್ಕ, ಚೆರ್ವತ್ತೂರು, ಅಜನೂರು, ಪಡನ್ನ ತಲಾ 1, ಮೊಗ್ರಾಲ್ ಪುತ್ತೂರು, ಉದುಮ ತಲಾ 10, ಮಂಜೇಶ್ವರ 9, ಕಾಸರಗೋಡು 7, ತ್ರಿಕ್ಕರಿಪುರ 3, ಪುತ್ತಿಗೆ 4, ಪೈವಳಿಕೆ 2, ವರ್ಕಾಡಿ 6, ನೀಲೇಶ್ವರ 3, ಕಾಸರಗೋಡು 7, ಚೆಮ್ನಾಡ್ 8 ಮಂದಿಗೆ ಸೋಂಕು ದೃಢಪಟ್ಟಿದೆ
ಜಿಲ್ಲೆಯಲ್ಲಿ ಇದುವರೆಗೆ ಸೋಂಕಿತರ ಸಂಖ್ಯೆ 1797 ಕ್ಕೆ ತಲುಪಿದೆ. 1,075ಮಂದಿ ಗುಣಮುಖರಾಗಿದ್ದಾರೆ. ಪ್ರಾಥಮಿಕ ಸಂಪರ್ಕದಿಂದ 1120 ಮಂದಿಗೆ ಸೋಂಕು ತಗಲಿದೆ.ಜಿಲ್ಲೆಯಲ್ಲಿ 3613 ಮಂದಿ ನಿಗಾದಲ್ಲಿದ್ದು, 951 ಮಂದಿ ಐಸೋಲೇಷನ್ ವಾರ್ಡ್ನಲ್ಲಿದ್ದಾರೆ.
17 ಹೊಸ ಹಾಟ್ ಸ್ಪಾಟ್
ಶನಿವಾರ 17 ಹೊಸ ಹಾಟ್ ಸ್ಪಾಟ್ಗಳನ್ನು ಗುರುತಿಸಲಾಗಿದೆ. ವರ್ಕಾಡಿ ಗ್ರಾಮ ಪಂಚಾಯತ್ನ 1, 2, 3, 5 , 7, 8, 9, 10 ವಾರ್ಡ್, ಪುತ್ತಿಗೆಯ 6 ಮತ್ತು 10 ನೇ ವಾರ್ಡ್ , ಪುಲ್ಲೂರು ಪೆರಿಯ 1, 7, 8, 9, 11, 13, 14 , 17 ವಾರ್ಡ್, ತ್ರಿಕ್ಕರಿಪುರ 1, 3, 4, 5, 7, 11, 13, 14, 15, 16 ವಾರ್ಡ್, ಉದುಮ 2, 6, 11, 16, 18, ವಳಿಯಪರಂಬ 6, 7 ಮತ್ತು 10 ನೇ ವಾರ್ಡ್ಗಳನ್ನು ಹಾಟ್ ಸ್ಪಾಟ್ ಆಗಿ ಗುರುತಿಸಲಾಗಿದೆ.