ಬೆಳ್ಮಣ್, ಆ. 01 (DaijiworldNews/MB) : ಗ್ರಾಮ ಪಂಚಾಯತಿ ಬೆಳ್ಮಣ್ ವ್ಯಾಪ್ತಿಯಲ್ಲಿ ಶನಿವಾರ ಮತ್ತೆ ಐವರಲ್ಲಿ ಕೋವಿಡ್ -19 ಸೋಂಕು ದೃಢಪಟ್ಟಿದೆ.

ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದ ಬೆಳ್ಮಣ್ ನಿವಾಸಿಯೊಬ್ಬರಿಗೆ ಹಾಗೂ ಅವರ ಪತ್ನಿಗೂ ಕೋವಿಡ್ ಪರೀಕ್ಷೆ ವರದಿ ಪಾಸಿಟಿವ್ ಬಂದಿದೆ, ಹಾಗೂ ಕೋಡಿಮಾರ್ ನಿವಾಸಿಯೊಬ್ಬರಿಗೆ ಪಾಸಿಟಿವ್ ವರದಿಯಾಗಿದ್ದು ಅವರ ಪತ್ನಿ ಹಾಗೂ ಇಬ್ಬರು ಮಕ್ಕಳಿಗೂ ಕೊರೊನಾ ಪಾಸಿಟಿವ್ ವರದಿಯಾಗಿದೆ.
ಶುಕ್ರವಾರ ಯಾವುದೇ ಪಾಸಿಟಿವ್ ವರದಿ ಇಲ್ಲದೆ ನಿಶ್ಚಿಂತೆಯಲ್ಲಿದ್ದ ಬೆಳ್ಮಣ್ ಗ್ರಾಮಸ್ಥರು ಶನಿವಾರ ಐವರಲ್ಲಿ ಕೊರೊನಾ ಸೋಂಕು ದೃಢವಾದ ಹಿನ್ನೆಲೆ ಮತ್ತೆ ಚಿಂತೆಗೀಡಾಗಿದ್ದಾರೆ.
ಕಳೆದ ಒಂದು ವಾರದಿಂದ ನಿರಂತರ ಬೆಳ್ಮಣ್ನಲ್ಲಿ ನಿರಂತರವಾಗಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಬುಧವಾರ ಒಂದೇ ದಿನದಲ್ಲಿ 21 ಮಂದಿಗೆ ಕರೋನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಬೆಳ್ಮಣ್ ಪೇಟೆಯಲ್ಲಿ ಸುಮಾರು 46 ಮನೆಗಳನ್ನು ಹಾಗೂ 88 ಅಂಗಡಿಗಳನ್ನು ಸೀಲ್ ಡೌನ್ ಮಾಡಲಾಗಿತ್ತು.