ಮಂಗಳೂರು, ಆ. 02 (DaijiworldNews/MB) : ಕೊರೊನಾ ಸೋಂಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಾಜ್ಯಾದಾದ್ಯಂತ ವಿಧಿಸಲಾಗಿದ್ದು ಭಾನುವಾರದ ಲಾಕ್ಡೌನ್ನ್ನು ಹಿಂಪಡೆಯಲಾಗಿದ್ದು ಇದರಂತೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಆಗಸ್ಟ್ 2 ರಂದು ಭಾನುವಾರದ ಲಾಕ್ಡೌನ್ ಇರುವುದಿಲ್ಲ.

ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ಗಳು ಸಂಚಾರ ಮಾಡುತ್ತಿದ್ದು ಮಂಗಳೂರು ನಗರದಲ್ಲಿ ಸೀಮಿತ ಪ್ರಮಾಣದಲ್ಲಿ ಬಸ್ ಸಂಚಾರ ನಡೆಸುತ್ತಿದೆ.
ಉಡುಪಿಯಲ್ಲಿ ಕಂಟೈನ್ಮೆಂಟ್ ವಲಯದಲ್ಲಿ ಆಗಸ್ಟ್ 31ರವರೆಗೂ ಕಟ್ಟುನಿಟ್ಟು ಮುಂದುವರೆಯಲಿದ್ದು ಭಾನುವಾರ ಲಾಕ್ಡೌನ್ ಕಾರಣ ಶನಿವಾರ ನಡೆಯುತ್ತಿದ್ದ ಸಂತೆಕಟ್ಟೆ ಸಂತೆ ಇನ್ನು ಮುಂದೆ ಭಾನುವಾರವೇ ನಡೆಯಲಿದೆ.
ಇನ್ನು ಉಡುಪಿಯಲ್ಲಿ ಪ್ರಯಾಣಿಕರು ಇಲ್ಲದ ಕಾರಣದಿಂದ ಸಿಟಿ ಬಸ್ಗಳು ಸಂಚಾರ ಮಾಡುವುದಿಲ್ಲ ಎಂದು ಉಡುಪಿ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದು ಹಾಗೆಯೇ ನರ್ಮ್, ಕೆಎಸ್ಆರ್ಟಿಸಿ ಬಸ್ಗಳ ಸಂಚಾರ ಇರುತ್ತದೆ ಎಂದು ಕೆಎಸ್ಆರ್ಟಿಸಿ ಉಡುಪಿ ವಿಭಾಗದ ಡಿಪೋ ಮ್ಯಾನೇಜರ್ ಉದಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.