ವಿಟ್ಲ, ಆ 02 (DaijiworldNews/PY): ಕಾರು ಅಪಘಾತದಲ್ಲಿ ಇಬ್ಬರು ನಟರು ಯಾವುದೇ ಅಪಾಯವಿಲ್ಲದೆ ಪಾರಾದ ಘಟನೆ ಆ.2 ರಂದು ಆದಿತ್ಯವಾರ ಮಧ್ಯಾಹ್ನ ವೇಳೆ ನಡೆದಿದೆ.

ನಿಯಂತ್ರಣ ಕಳೆದು ಕಾರೊಂದು ರಸ್ತೆ ಬದಿಗೆ ನುಗ್ಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪವಾಡಸದೃಶ್ಯ ರೀತಿಯಲ್ಲಿ ಪಾರಾದ ಘಟನೆ
ಸೂರಿಕುಮೇರ್ ಸಮೀಪದ ದಾಸಕೋಡಿ ಎಂಬಲ್ಲಿ ನಡೆದಿದೆ.
ಮಂಗಳೂರು ಕಡೆಯಿಂದ ಮಾಣಿ ಕಡೆಗೆ ತುಳು ಚಲನಚಿತ್ರ ಹಾಸ್ಯ ನಟರಾದ ಸುಂದರ ರೈ ಮಂದಾರ ಮತ್ತು ಚಂದ್ರಹಾಸ ಅನಂತಾಡಿ ಅವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ನಿಯಂತ್ರಣ ಕಳೆದು ಈ ಘಟನೆ ಸಂಭವಿಸಿದೆ.
ಕಾರು ನಿಯಂತ್ರಣ ಕಳೆದು ಕೊಂಡು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಅತಿಯಾದ ಮಳೆ ಸುರಿಯುತ್ತಿರುವ ಕಾರಣ ಚಾಲಕನಿಗೆ ರಸ್ತೆ ಕಾಣದೆ ಈ ಎಡವಟ್ಟು ಆಗಿರಬೇಕು ಅಥವಾ ಕಾರಿನ ದೋಷದಿಂದ ನಿಯಂತ್ರಣ ಕಳೆದುಕೊಂಡಿದೆಯಾ ಎಂಬುದು ಇನ್ನಷ್ಟೆ ತಿಳಿಯಬೇಕಾಗಿದೆ.
ವಿಟ್ಲ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.