ಬೆಳ್ತಂಗಡಿ, ಆ. 03 (DaijiworldNews/MB) : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸಂಪತ್ತಿನ ಲೆಕ್ಕವನ್ನು ಸಿಬಿಐ ಕೇಳಿತ್ತು. ಅದಾದ ಬಳಿಕ ಅವರಿಗೆ ನಿದ್ದೆಯ್ಲೂ ಎಚ್ಚರದಲ್ಲೂ ಲೆಕ್ಕದ ನೆನಪೇ ಬರುತ್ತಿದೆ'' ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಅವರು ಡಿಕೆಶಿಯನ್ನು ಲೇವಡಿ ಮಾಡಿದ್ದಾರೆ.

''ಜಿಲ್ಲೆಗೆ ಶುಕ್ರವಾರ ಭೇಟಿ ನೀಡಿದ ಡಿಕೆಶಿ ಅವರಿಗೆ ಲೆಕ್ಕ ಕೇಳುವ ಭ್ರಮೆ ಹಿಡಿದಿದೆ. ಸುಳ್ಯದ ಜನಸಾಮಾನ್ಯರು ಒಬ್ಬರು ವಿದ್ಯುತ್ ಲೆಕ್ಕ ಕೇಳಿದ ಸಂದರ್ಭದಲ್ಲಿ ಅಧಿಕಾರ ದುರುಪಯೋಗ ಮಾಡಿ ಪೊಲೀಸರ ಮೂಲಕ ಹಿಂಸೆ ನೀಡಿರುವುದನ್ನು ಜಿಲ್ಲೆಯ ಜನರು ಎಂದಿಗೂ ಮರೆಯಲ್ಲ. ಡಿಕೆಶಿಯತಹ ನಾಯಕರಿಂದ ಹೆಚ್ಚಿನ ನಿರೀಕ್ಷೆ ಮಾಡಲಾಗದು'' ಎಂದು ಹೇಳಿದರು.
''ಕೊರೊನಾ ಸಂಕಷ್ಟದ ಸಂದರ್ಭ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸರಿಯಾದ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಕಾಂಗ್ರೆಸ್ ನಾಯಕರು ಮಾತ್ರ ಯಾವುದೇ ಆಧಾರವಿಲ್ಲದ ಆರೋಪ ಮಾಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ'' ಎಂದು ಪ್ರತಾಪ ಸಿಂಹ ನಾಯಕ್ ಅವರು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.