ಉಪ್ಪಿನಂಗಡಿ, ಆ 03 (DaijiworldNews/PY): ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು-ಮಂಗಳೂರು ರಸ್ತೆಯ ನೀರಕಟ್ಟೆ ಎಂಬಲ್ಲಿ ಸಿಮೆಂಟ್ ಹುಡಿ ಹೇರಿಕೊಂಡು ಬರುತ್ತಿದ್ದ ಟ್ಯಾಂಕರೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ನೀರಕಟ್ಟೆ ಬಳಿ ಬರುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದ್ದು, ಟ್ಯಾಂಕರ್ ಚರಂಡಿಗೆ ಬಿದ್ದ ಪರಿಣಾಮ ಚಾಲಕ ಗಣೇಶ್ ಚರಂಡಿಯಲ್ಲಿದ್ದ ಮಣ್ಣಿನೊಳಕ್ಕೆ ಹೂತು ಹೋಗಿದ್ದರು.
ಟ್ಯಾಂಕರ್ ಚರಂಡಿಗೆ ಮಗುಚಿ ಬಿದ್ದದ್ದನ್ನು ಕಂಡ ಸ್ಥಳೀಯರಾದ ಮನ್ಸೂರ್ ಹಾಗೂ ಮುಫ್ತಾಬ್ ಹಾಗೂ ಇತರರು ಚರಂಡಿಯ ಮಣ್ಣಿನೊಳಕ್ಕೆ ಹೂತಿದ್ದ ಚಾಲಕನನ್ನು ಹೊರತೆಗೆದಿದ್ದಾರೆ.
ಗಾಯಗೊಂಡಿದ್ದ ಚಾಲಕನನ್ನು ನೆಲ್ಯಾಡಿ ಆಸ್ಪತ್ರೆಗೆ ಕರೆದೊಯ್ದು ಬಳಿಕ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯ ಬಗ್ಗೆ ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.