ಉಡುಪಿ, ಆ. 03, (DaijiworldNews/SM): ಜಿಲ್ಲೆಯಲ್ಲಿ ಸೋಮವಾರದಂದು ಮತ್ತೆ 126 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಆ ಮೂಲಕ ಸೋಂಕಿತರ ಸಂಖ್ಯೆ 4800ಕ್ಕೆ ತಲುಪಿದೆ.

ಜಿಲ್ಲೆಯಲ್ಲಿ ಇಲ್ಲಿಯ ತನಕ 2812 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಸೋಮವಾರದಂದು 1086 ಮಂದಿಯ ವರದಿ ನೆಗೆಟಿವ್ ಬಂದಿದೆ. 526 ಮಂದಿಯ ವರದಿ ನಿರೀಕ್ಷಿಸಲಾಗಿದೆ. ಸದ್ಯ ಜಿಲ್ಲೆಯಲ್ಲಿ 1962 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಇಲ್ಲಿಯ ತನಕ 36 ಮಂದಿ ಕೊರೊನಾದಿಂದಾಗಿ ಮೃತಪಟ್ಟಿರುವ ಬಗ್ಗೆ ವರಬಿ ಲಭ್ಯವಾಗಿದೆ.