ಪುತ್ತೂರು, ಆ 04(DaijiworldNews/HR): ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಆರೋಗ್ಯ ಇಲಾಖೆಯ ವರದಿಯಂತೆ 12 ಮಂದಿಗೆ ಕೊರೊನಾ ದೃಡ ಪಟ್ಟಿದೆ.

ಪುತ್ತೂರಿನ ಪಡೀಲ್ ನಿವಾಸಿ 29 ವರ್ಷದ ಮಹಿಳೆ, ಬನ್ನೂರು ಆನೆಮಜಲು ನಿವಾಸಿ 53 ವರ್ಷದ ಮಹಿಳೆ, ನೆಹರೂನಗರ ನಿವಾಸಿ 32 ವರ್ಷದ ಮಹಿಳೆ, ತಾರಿಗುಡ್ಡೆ ನಿವಾಸಿ 34ರ ವ್ಯಕ್ತಿ, ಪೂತ್ತೂರಿನ ತೆಂಕಿಲ ನಿವಾಸಿ 53 ವರ್ಷದ ವ್ಯಕ್ತಿ, ಕಲ್ಲಾರೆಯ 30 ವರ್ಷದ ಮಹಿಳೆ, ಆರ್ಯಾಪು ಗ್ರಾಮದ ಕುರಿಯ ನಿವಾಸಿ 50 ವರ್ಷದ ವ್ಯಕ್ತಿ, ಕೊಡಿಪ್ಪಾಡಿ ಗ್ರಾಮದ ನಿವಾಸಿ 35 ವರ್ಷದ ವ್ಯಕ್ತಿ, ಉಪ್ಪಿನಂಗಡಿ ನಿವಾಸಿ 85 ವರ್ಷದ ವೃದ್ಧ, ಕಬಕ ಗ್ರಾಮದ 70 ವರ್ಷದ ಮಹಿಳೆ ಮತ್ತು 16ವರ್ಷದ ಬಾಲಕಿಯಲ್ಲಿ ಮತ್ತು ಕಡಬ ತಾಲೂಕಿನ ಐತ್ತೂರು ಗ್ರಾಮದ ಸುಂಕದಕಟ್ಟೆಯ 42 ವರ್ಷ ಪ್ರಾಯದ ಮಹಿಳೆಯಲ್ಲಿ ಕೊರೊನಾ ದೃಢಪಟ್ಟಿದೆ.