ಮಂಗಳೂರು, ಆ 04(DaijiworldNews/HR): ಐತಿಹಾಸಿಕ ರಾಮಮಂದಿರ ಶಿಲಾನ್ಯಾಸಕ್ಕೆ ಕ್ಷಣಗಣನೆ ಶುರುವಾಗಿದೆ. ಹಿಂದೂಗಳ ಬಹುವರ್ಷಗಳ ಕನಸಾದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಆಗಸ್ಟ್ 5 ಭೂಮಿ ಪೂಜೆ ನೆರವೇರಲಿದೆ. ಈ ಸಂದರ್ಭದಲ್ಲಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ವ್ಯಾಪ್ತಿಯ ಎಲ್ಲಾ ಬಂಧುಗಳೂ ತಮ್ಮ ಮನೆಯಲ್ಲೇ ಸಂಭ್ರಮಾಚರಣೆ ಮಾಡುವಂತೆ ಶಾಸಕ ವೇದವ್ಯಾಸ್ ಕಾಮತ್ ಮನವಿ ಮಾಡಿದ್ದಾರೆ.

ಕೋವಿಡ್- 19 ಸುರಕ್ಷಾ ನಿಯಮಗಳನ್ನು ಪಾಲಿಸುತ್ತಾ ಎಲ್ಲರೂ ತಮ್ಮ ಮನೆಗಳಲ್ಲಿ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳಬೇಕು. ಭೂಮಿ ಪೂಜೆಯ ನೇರಪ್ರಸಾರವನ್ನು ಸಾಮಾಜಿಕ ಜಾಲತಾಣ ಅಥವಾ ಟಿವಿ ಮಾಧ್ಯಮಗಳಲ್ಲಿ ವೀಕ್ಷಿಸುವ ಮೂಲಕ ಸಂಭ್ರಮಾಚರಿಸಬೇಕು.
ಯಾವುದೇ ಕಾರ್ಯಕರ್ತರು ಬಹಿರಂಗ ಮೆರವಣಿಗೆಯನ್ನು ಮಾಡಬಾರದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ಮಂದಿರ ನಿರ್ಮಾಣ ಕಾರ್ಯದ ಸಂತಸ ಹಂಚೋಣ. ಜೊತೆಗೆ ಕೋವಿಡ್ -19ರ ವಿರುದ್ಧ ಒಂದಾಗಿ ಹೋರಾಡೋಣ ಎಂದು ಶಾಸಕ ವೇದವ್ಯಾಸ್ ಕಾಮತ್ ಮನವಿ ಮಾಡಿಕೊಂಡಿದ್ದಾರೆ.