ಕಾಸರಗೋಡು, ಆ. 04 (DaijiworldNews/SM): ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಎರಡು ಸಾವಿರದ ಗಡಿ ದಾಟಿದೆ. ಫೆಬ್ರವರಿ 3ರಿಂದ ಮಂಗಳವಾರ ತನಕ 2067 ಮಂದಿಗೆ ಸೋಂಕು ತಗಲಿದೆ. ಈ ಪೈಕಿ 1146 ಮಂದಿ ಗುಣಮುಖರಾಗಿದ್ದು, 913 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂಟು ಮಂದಿ ಮೃತಪಟ್ಟಿದ್ದಾರೆ.

ಮಂಗಳವಾರ 91 ಮಂದಿಗೆ ಕೊರೋನ ಪಾಸಿಟಿವ್ ಪತ್ತೆಯಾಗಿದ್ದು, 87 ಮಂದಿಗೆ ಸಂಪರ್ಕದಿಂದ ಸೋಂಕು ದೃಢಪಟ್ಟಿದೆ. ಇಬ್ಬರು ಹೊರರಾಜ್ಯ ಹಾಗೂ ಇಬ್ಬರು ವಿದೇಶದಿಂದ ಬಂದವರಾಗಿದ್ದಾರೆ. ಸೋಂಕಿತರಲ್ಲಿ ಇಬ್ಬರು ಆರೋಗ್ಯ ಸಿಬ್ಬಂದಿಗಳು ಒಳಗೊಂಡಿದ್ದಾರೆ.
ಉದುಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅತೀ ಹೆಚ್ಚು 27 ಮಂದಿಗೆ ಸೋಂಕು ದೃಢಪಟ್ಟಿದೆ. ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿ 18, ಮಧೂರು, ನೀಲೇಶ್ವರ ಮತ್ತು ಚೆಮ್ನಾಡ್ ತಲಾ 3, ಕಾರಡ್ಕ, ಪಳ್ಳಿಕೆರೆ, ಕಾಞ0ಗಾಡ್ ವ್ಯಾಪ್ತಿಯಲ್ಲಿ ತಲಾ ಐವರು, ಪುತ್ತಿಗೆ, ಎಣ್ಮಕಜೆ, ಕಯ್ಯೂರು ಚಿಮೇನಿ, ಕಳ್ಳಾರ್ ತಲಾ ಒಬ್ಬರು, ಅಜನೂರು 9, ಚೆಂಗಳದ ನಾಲ್ಕು ಮಂದಿಗೆ ಸೋಂಕು ಪತ್ತೆಯಾಗಿದೆ.
25 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ 2888 ಮಂದಿ ನಿಗಾದಲ್ಲಿದ್ದು, 1144 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.