ಮಂಗಳೂರು, ಆ. 05 (DaijiworldNews/MB) : ಅವಿಭಜಿತ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಆಗಸ್ಟ್ 4 ರ ಮಂಗಳವಾರ ದಿವವಿಡೀ ಭಾರೀ ಮಳೆಯಾಗಿದ್ದು ಇಂದು ಕೂಡಾ ನಿರಂತರವಾಗಿ ಮಳೆ ಸುರಿಯುವ ಸಾಧ್ಯೆತೆಯಿದ್ದು ಹವಾಮಾನ ಇಲಾಖೆ ಆಗಸ್ಟ್ 5 ರ ಬುಧವಾರ ರೆಡ್ ಅಲರ್ಟ್ ಘೋಷಿಸಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಕೇಂದ್ರಗಳಲ್ಲಿ ಮಂಗಳವಾರ ಭಾರೀ ಮಳೆಯಾಗಿದ್ದು ಸಂಜೆಯಾಗುತ್ತಲ್ಲೇ ಇನ್ನೂ ಅಧಿಕವಾಗಿದೆ. ಹಾಗೆಯೇ ಈ ಎರಡೂ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಭಾರಿ ಮಳೆಯಾಗಿದೆ. ಕೈಕಂಬ ಗಂಜಿಮಠದೊಳಗಿನ ಬಡಗುಲಿಪಡಿ ಗ್ರಾಮ ಪಂಚಾಯಿತಿಯ ನಾಡಜೆಯಲ್ಲಿರುವ ಮನೆಯೊಂದರ ಮೇಲೆ ಮರ ಬಿದ್ದು ಹಾನಿ ಉಂಟಾಗಿದೆ. ಅದೇ ರೀತಿ ಎಡಪದವು ಗ್ರಾಮದ ಪೂಪಾಡಿಕಲ್ಲುವಿನಲ್ಲಿಯೂ ಮರ ಬಿದ್ದು ಮನೆಗೆ ಹಾನಿಯಾಗಿದೆ. ಕುಂದಾಪುರ ತಾಲ್ಲೂಕಿನ ನಾಲ್ಕು ಮನೆಗಳಿಗೆ ಹಾನಿಯಾಗಿದೆ.
ಇನ್ನು ಕೃತಕ ಪ್ರವಾಹದಿಂದ ಹಲವಾರು ಗ್ರಾಮಗಳು ಮತ್ತು ಕೃಷಿ ಭೂಮಿಗಳು ಮುಳುಗಿದ್ದು ಉಡುಪಿ ಜಿಲ್ಲೆಯ ಸೌಪರ್ಣಿಕಾ ಸೇರಿದಂತೆ ಹಲವು ನದಿಗಳು ತುಂಬಿ ಹರಿಯುತ್ತಿವೆ. ಕೊಡಗು ಜಿಲ್ಲೆಯಲ್ಲೂ ಭಾರಿ ಮಳೆಯಾಗಿದೆ.
ಬುಧವಾರ ರಾತ್ರಿ 11.30 ರ ನಡುವೆ ಸಮುದ್ರ ತೀರದಲ್ಲಿ 3 ರಿಂದ 3.6 ಮೀಟರ್ ಎತ್ತರದ ಅಲೆಗಳು ಏಳುವ ಸಾಧ್ಯತೆಯಿದ್ದು ಸಮುದ್ರದ ಹತ್ತಿರ ವಾಸಿಸುವ ಜನರಿಗೆ ಜಾಗರೂಕರಾಗಿರಲು ತಿಳಿಸಲಾಗಿದೆ.