ಮಂಗಳೂರು, ಆ. 05 (DaijiworldNews/MB) : ಮಂಗಳೂರು ಮೂಲದ ಅಸ್ರೀನಾ ಸಿವಿಲ್ ನ್ಯಾಯಾಧೀಶೆಯಾಗಿ ರಾಜ್ಯ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಿಂದ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಹಳೆಯಂಗಡಿಯ ಅಕ್ಬರ್ ಅಲಿ ಮತ್ತು ಅಸ್ಮತ್ ದಂಪತಿಗಳ ಪುತ್ರಿ ಅಸ್ರೀನಾ ಪ್ರಸ್ತುತ ಕೃಷ್ಣಾಪುರದ ಚೊಕ್ಕಬೆಟ್ಟುವಿನಲ್ಲಿ ವಾಸಿಸುತ್ತಿದ್ದಾರೆ. ಅಸ್ರೀನಾರ ತಂದೆ ಅಕ್ಬರ್ ಅಲಿ ಮಂಗಳೂರಿನಲ್ಲಿ ಎಂಆರ್ಪಿಎಲ್ ಉದ್ಯೋಗಿಯಾಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ.
ಹಳೆಯಂಗಡಿ ಮತ್ತು ಕಿನ್ನಿಗೋಳಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆದ ಇವರು ಮಂಗಳೂರಿನ ಎಸ್ಡಿಎಂ ಕಾನೂನು ಕಾಲೇಜಿನಿಂದ ಪದವಿ ಪೂರೈಸಿದರು. ನಂತರ ನಗರದ ಹಿರಿಯ ವಕೀಲರಾದ ಮಯೂರಾ ಕೀರ್ತಿ ಶರತ್ ಕುಮಾರ್ ಬಿ ಅವರ ಮಾರ್ಗದರ್ಶನದಲ್ಲಿ ವಕೀಲೆ ವೃತ್ತಿಜೀವನ ಪ್ರಾರಂಭಿಸಿದರು.
2019 ರಲ್ಲಿ ನ್ಯಾಯಾಧೀಶ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.