ಬೆಳ್ತಂಗಡಿ, ಆ 05 (DaijiworldNews/PY): ಮಂಗಳವಾರ ಹಾಗೂ ಬುಧವಾರ ಸುರಿದ ಭಾರೀ ಮಳೆಗೆ ಮಲವಂತಿಗೆ ಗ್ರಾಮದ ದಿಡುಪೆಯ ಕಲ್ಬೆಟ್ಟು ಎಂಬಲ್ಲಿನ ನೇತ್ರಾವತಿ ಕಿನಾರೆಯ ಸೇತುವೆಯ ಸಂಪರ್ಕ ಕಡಿದುಹೋಗಿದ್ದು, ಅಪಾಯದಲ್ಲಿದೆ.



ನದಿಯ ಪ್ರವಾಹಕ್ಕೆ ಸೇತುವೆಯೂ ಹಾನಿಗೊಳಗಾಗಿದ್ದು ಜನರ, ವಾಹನಗಳ ಓಡಾಟಕ್ಕೆ ಅನಾನುಕೂವಾಗಿದೆ. ಸಾರ್ವಜನಿಕರಿಗೆ ಮತ್ತು ಹೈನುಗಾರಿಕೆಯವರಿಗೆ ಹಾಗೂ ಕೃಷಿಕರಿಗೆ ಈ ಸೇತುವೆ ಸಂಪರ್ಕ ತುಂಬಾ ಅನುಕೂಲ ಆಗುತಿದ್ದು ಈ ಸೇತುವೆಯನ್ನೇ ನಂಬಿದ್ದಾರೆ.
ಸುಮಾರು 100 ರಿಂದ 150 ಕುಟುಂಬಕ್ಕೂ ಹೆಚ್ಚು ಜನ ಕೊಲ್ಲಿ ದೇವಸ್ಥಾನದಿಂದ ದಿಡುಪೆಗೆ ಸಂಪರ್ಕ ಕಲ್ಪಿಸುತ್ತಿರುವ ಸೇತುವೆ ಸಂಪೂರ್ಣ ಅಪಾಯದಲ್ಲಿ ಇದೆ. ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುವ ಸಂಭವವಿರುವುದರಿಂದ ಕೂಡಲೇ ದುರುಸ್ಥಿಗೊಳಿಸುವಂತಾಗಬೇಕಾಗಿದೆ.