ಮಂಗಳೂರು, ಆ 05 (DaijiworldNews/PY): ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಂಕುಸ್ಥಾಪನೆಯ ಪ್ರಯುಕ್ತ ಶಾಸಕ ವೇದವ್ಯಾಸ್ ಕಾಮತ್ ಅವರ ನೇತೃತ್ವದಲ್ಲಿ ರಥಬೀದಿ ವೆಂಕಟರಮಣ ದೇವಸ್ಥಾನದ ಮುಂಭಾಗದಲ್ಲಿ ಬಲೂನ್ ಹಾರಿಸಿ ಸಂಭ್ರಮಾಚರಿಸಲಾಯಿತು.


ಕಳೆದ ಅನೇಕ ವರ್ಷಗಳಿಂದ ನಂಬಿಕೆಯ ಮೇಲಿನ ಹೋರಾಟವಾದ ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂದಿರದ ಶಿಲಾನ್ಯಾಸ ನೆರವೇರಿಸುವ ಶುಭ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನದೊಂದಿಗೆ ಶಾಸಕ ವೇದವ್ಯಾಸ್ ಕಾಮತ್ ಅವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ಜಾರಿಗೊಳಿಸಿರುವ ಸೆಕ್ಷನ್ 144 ಗಣನೆಗೆ ತೆಗೆದುಕೊಂಡು ಏಕ ಕಾಲಕ್ಕೆ ಮುಹೂರ್ತದ ಸಮಯದಲ್ಲಿ ಉರ್ವಸ್ಟೋರ್ ಜಂಕ್ಷನ್, ಬಿಕರ್ನಕಟ್ಟೆ, ಮಂಗಳಾದೇವಿ ಜಂಕ್ಷನ್ ಬಳಿ ಬಲೂನ್ಗಳನ್ನು ಜೈಶ್ರೀರಾಮ್ ಧ್ವಜದೊಂದಿಗೆ ಹಾರಿಸಲಾಯಿತು.
ಶಾಸಕ ವೇದವ್ಯಾಸ್ ಕಾಮತ್ ಉಪಸ್ಥಿತರಿದ್ದರು.