ಮಂಗಳೂರು, ಆ. 05(DaijiworldNews/SM): ಆಗಸ್ಟ್ 5ರಿಂದ ಅಂತರಾಜ್ಯ ಸಂಚಾರಕ್ಕೆ ಕೇಂದ್ರ ಸರಕಾರ ಹೊರಡಿಸಿದ್ದ ಮಾರ್ಗಸೂಚಿಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆದರಂತೆ, ದ.ಕ. ಜಿಲ್ಲೆ ಹಾಗೂ ಕಾಸರಗೋಡು ಜಿಲ್ಲೆಯ ನಡುವೆ ಸಂಚಾರಕ್ಕೆ ಅವಕಾಶ ಸಿಗಲಿದೆ ಎನ್ನುವ ನಿರೀಕ್ಷೆಯನ್ನು ಹೊಂದಲಾಗಿತ್ತು. ಆದರೆ, ಆ ನಿರೀಕ್ಷೆ ಹುಸಿಯಾಗಿದೆ. ಸದ್ಯ ಉಭಯ ಜಿಲ್ಲೆಗಳ ಮಧ್ಯೆ ಸಂಚಾರಕ್ಕೆ ಯಾವುದೇ ಅವಕಾಶವಿಲ್ಲ.

ಈ ನಡುವೆ ಕಾಸರಗೋಡು ಜಿಲ್ಲೆಯಿಂದ ಮಂಗಳೂರಿಗೆ ನಿತ್ಯ ಪಾಸ್ ಪಡೆದು ಸಾವಿರಾರು ಉದ್ಯೋಗಿಗಳು ಆಗಮಿಸುತ್ತಿದ್ದರು. ಆದರೆ, ಸೋಂಕು ಹೆಚ್ಚಳವಾಗುತ್ತಿದ್ದಂತೆ ಇದಕ್ಕೆ ಕಾಸರಗೋಡು ಜಿಲ್ಲಾಡಳಿತ ತಡೆ ನೀಡಿತ್ತು. ಇದೀಗ ಈ ಹಿಂದೆ ವಿತರಿಸಿದ ಪಾಸ್ ಗಳಿಗೆ ಪುನರ್ ಮಾನ್ಯತೆ ನೀಡುವಂತೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ. ಈಗಾಗಲೇ ಸಾವಿರದ ಐನೂರು ಮಂದಿಗೆ ಪಾಸ್ ವಿತರಣೆ ಮಾಡಲಾಗಿದೆ. ನಿತ್ಯ ಪ್ರಯಾಣದ ಪಾಸ್ ಹೊಂದಿದ್ದವರಿಗೆ, ಅವರೆಲ್ಲರ ಪಾಸ್ ಗಳಿಗೆ ಪುನರ್ ಮಾನ್ಯತೆ ನೀಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.
ಆಗಸ್ಟ್ ೫ರಿಂದ ಅಂತರಾಜ್ಯ ಸಂಚಾರಕ್ಕೆ ಕೇಂದ್ರ ಅವಕಾಶ ಕಲ್ಪಿಸಲಾಗಿದ್ದು, ಅದರಂತೆ ದ.ಕ. ಜಿಲ್ಲೆ ಹಾಗೂ ಕಾಸರಗೋಡು ನಡುವೆ ಸಂಚಾರಕ್ಕೆ ಅವಕಾಶ ಸಿಗಬಹುದೆಂಬ ನಿರೀಕ್ಷೆ ಇಡಲಾಗಿತ್ತು. ಆದರೆ, ಸದ್ಯ ಯಾವುದೇ ಆದೇಶ ನೀಡದಿರುವುದು ಮತ್ತೆ ಗಡಿ ಭಾಗದ ಜನತೆಗೆ ನಿರಾಸೆಯನ್ನುಂಟು ಮಾಡಿದೆ.