ಬೆಳ್ತಂಗಡಿ, ಆ. 06 (DaijiworldNews/MB) : ಚಾರ್ಮಾಡಿ ಘಾಟ್ನ 6ನೇ ತಿರುವಿನಲ್ಲಿ ಹೆದ್ದಾರಿಗೆ ಬಂಡೆಗಳು ಚಿಕ್ಕಮಗಳೂರು ಮಂಗಳೂರು ಸಂಚಾರ ಸ್ಥಗಿತವಾಗಿದೆ.








ಮಂಗಳೂರು – ಚಿಕ್ಕಮಗಳೂರು ರಸ್ತೆಯ ಚಾರ್ಮಾಡಿ ಘಾಟ್ 2 ಮತ್ತು 3 ನೇ ತಿರುವಿನ ಮಧ್ಯೆ ಭೂ ಕುಸಿತವಾದ ಘಟನೆ ಬುಧವಾರ ಸಂಜೆ ನಡೆದಿದ್ದು, ಸಂಜೆ ಬೃಹದಾಕಾರದ ಎರಡು ಬಂಡೆಗಳು ಕುಸಿದಿದೆ. ಸದ್ಯ ಒಂದು ವಾಹನ ಸಾಗುವಷ್ಟು ದಾರಿ ತೆರವು ಮಾಡಲಾಗಿದೆ. ಯಾವುದೇ ಅಪಾಯ, ಹಾನಿ ಸಂಭಿವಿಸಿಲ್ಲ ಎಂದು ಹೇಳಲಾಗಿದೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ಅಧಿಕಾರಿಗಳು, ಬುಧವಾರ ಸಂಜೆ ಏಳರ ಬಳಿಕ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಇರುವುದರಿಂದ ರಾತ್ರಿ ತೆರವು ಕಾರ್ಯ ನಡೆಯಲಿದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ.
ಕಳೆದ ಎರಡು ದಿನಗಳಿಂದ ಕರಾವಳಿಯಲ್ಲಿ ನಿರಂತರ ಮಳೆ ಸುರಿಯುತ್ತಿರುವ ಪರಿಣಾಮದಿಂದಾಗಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸಣ್ಣಪುಟ್ಟ ಭೂಕುಸಿತ ಉಂಟಾಗಿದ್ದು ತೆರವು ಕಾರ್ಯಚರಣೆಗಾಗಿ ಜೆಸಿಬಿಗಳನ್ನು ಈಗಾಗಲೇ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಾಗೆಯೇ ಈಗಾಗಲೇ ಕೆಲವು ಚಿಕ್ಕಮಗಳೂರು ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ಅಪಾಯದ ಸ್ಥಿತಿ ಇರುವುದರಿಂದಾಗಿ ವಾಹನ ಸವಾರರು ಎಚ್ಚರವಾಗಿರುವುದು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.