ಮಂಗಳೂರು, ಆ. 06 (DaijiworldNews/MB) : ನೇತ್ರಾವತಿ ಸೇತುವೆಯ ಬುಧವಾರ ಬೈಕ್ ಒಂದು ಪತ್ತೆಯಾಗಿದ್ದು ಬೈಕ್ನ ಮಾಲೀಕರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.

ರಾತ್ರಿ ಪಾಳಿ ಕೆಲಸಕ್ಕೆ ತೆರಳಿದ್ದ ವಿವಾಹಿತರೊಬ್ಬರ ಬೈಕ್ ನೇತ್ರಾವತಿ ಸೇತುವೆಯಲ್ಲಿ ಆ.3 ರಂದು ಪತ್ತೆಯಾಗಿದೆ. ಇವರು ನಾಪತ್ತೆಯಾಗಿರುವ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪತ್ನಿ ನಾಪತ್ತೆ ದೂರು ದಾಖಲಿಸಿದ್ದಾರೆ.
ಎಂ. ರಘು (32) ನಾಪತ್ತೆಯಾದವರು. ಮೊಗವೀರಪಟ್ನದ ಪತ್ನಿ ಮನೆಯಿಂದ ಪಿಲಾರು ಲಕ್ಷ್ಮೀಗುಡ್ಡೆಯ ಖಾಸಗಿ ಆಹಾರ ಸಂಸ್ಥೆಗೆ ರಾತ್ರಿ ಪಾಳಯದ ಉದ್ಯೋಗಕ್ಕೆ ತೆರಳಿದವರು ಮರಳಿ ವಾಪಸ್ಸಾಗದೆ ನಾಪತ್ತೆಯಾಗಿದ್ದಾರೆ.
ಮರುದಿನ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ರಘು ಉಪಯೋಗಿಸುತ್ತಿದ್ದ ದ್ವಿಚಕ್ರ ವಾಹನ, ಮೊಬೈಲ್ ಫೋನ್, ಪರ್ಸ್, ಚಪ್ಪಲಿಗಳು ಸೇತುವೆ ಮೇಲೆ ಪತ್ತೆಯಾಗಿದೆ.
ಈ ಕುರಿತು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ವಿಚಾರಣೆ ಕೈಗೆತ್ತಿಕೊಂಡಾಗ ರಘು ಅಂದು ಕೆಲಸಕ್ಕೂ ತೆರಳದೇ ಇರುವ ಬಗ್ಗೆ ಮಾಹಿತಿ ದೊರೆತಿತ್ತು. ಇದೀಗ ಪತ್ನಿ ಚೈತ್ರ ಎಂಬವರು ಉಳ್ಳಾಲ ಠಾಣೆಯಲ್ಲಿ ನೀಡಿದ ದೂರಿನಂತೆ ನಾಪತ್ತೆ ಪ್ರಕರಣ ದಾಖಲಾಗಿದೆ.