ಉಡುಪಿ, ಆ. 06(DaijiworldNews/HR): ದ.ಕ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಬುಧವಾರ ಧಾರಾಕಾರ ಮಳೆಯಾಗಿದ್ದು, ಉಡುಪಿಯ ಅಂಬಾಗಿಲು ಪುತ್ತೂರು ಗ್ರಾಮದ ಗುಲಾಬಿ (60) ಮಹಿಳೆ ಮಳೆ ನೀರಿನ ಚರಂಡಿಗೆ ಜಾರಿ ಬಿದ್ದು ಮೃತಪಟ್ಟಿದ್ದಾರೆ.

ನಿಟ್ಟೂರು- ಹನುಮಂತ ನಗರದ ರಸ್ತೆಯಲ್ಲಿ ಕತ್ತಲಿನಲ್ಲಿ ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ, ಮಳೆ ನೀರಿನ ಚರಂಡಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.