ಉಡುಪಿ, ಆ. 06 (DaijiworldNews/MB) : ನಗರದ ಹೊರ ವಲಯದ ಕುಕ್ಕಿಕಟ್ಟೆ ಮಾರ್ಪಳ್ಳಿಯಲ್ಲಿ ವೃದ್ದೆಯೋರ್ವರು ಆಕಸ್ಮಿಕವಾಗಿ ಬಾವಿಗೆ ಬಿದಿದ್ದು, ನಗರ ಠಾಣೆಯ ಎಸ್ಐ, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಆಟೋ ಚಾಲಕರೊಬ್ಬರು ತಮ್ಮ ಜೀವದ ಹಂಗು ತೊರೆದು ಕೂಡಲೇ ಬಾವಿಗಿಳಿದು ವೃದ್ದೆಯನ್ನು ರಕ್ಷಿಸಿದ್ದಾರೆ.



ವೃದ್ಧೆ ತಮ್ಮ ಮನೆಯ ಬಾವಿಗೆ ಆಕಸ್ಮಿಕವಾಗಿ ಬಿದಿದ್ದು ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿಲಾಗಿದೆ. ಉಡುಪಿ ನಗರ ಠಾಣೆಯ ಪಿ.ಎಸ್.ಐ ಸದಾಶಿವ ರಾ. ಗವರೋಜಿ ತಕ್ಷಣ ಸ್ಥಳಕ್ಕಾಗಮಿಸಿದ್ದಾರೆ.
ಬಾವಿಗಿಳಿದು ಅಜ್ಜಿಯನ್ನು ರಕ್ಷಿಸುವ ಸಿದ್ದತೆಯನ್ನು ಅಗ್ನಿಶಾಮಕ ದಳದವರು ಮಾಡುತ್ತಿದ್ದಂತೆ ಎಸ್ ಐ ಸದಾಶಿವ, ಅಗ್ನಿಶಾಮಕ ದಳದ ಸಿಬ್ಬಂದಿ ವಿನಾಯಕ ಹಾಗೂ ಸ್ಥಳೀಯ ಆಟೋ ಚಾಲಕ ರಾಜೇಶ್ ನಾಯಕ್ ಕೂಡಲೇ ಬಾವಿಗಿಳಿದು ಅಜ್ಜಿಯನ್ನು ರಕ್ಷಿಸಿದ್ದಾರೆ.
ತುರ್ತು ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಬಾವಿಗಿಳಿದು ವೃದ್ದೆಯನ್ನು ರಕ್ಷಿಸಿದ ಈ ಮೂವರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಅಭಿನಂದಿಸಿದ್ದಾರೆ.