ಉಡುಪಿ, ಆ. 06(DaijiworldNews/HR): ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಉಡುಪಿ ಜಿಲ್ಲಾ ಕೋವಿಡ್-19 ನೋಡೆಲ್ ಅಧಿಕಾರಿಯಾಗಿರುವ ಡಾ. ಭಟ್ ಅವರಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ.

ಉಡುಪಿಯಲ್ಲಿ ಕಳೆದ ನಾಲ್ಕುವರೆ ತಿಂಗಳಿನಿಂದ ಕೋವಿಡ್-19 ನೋಡೆಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು, ಪ್ರತಿಯೊಂದು ಸೋಂಕಿತರ ಚಿಕಿತ್ಸೆಯ ಉಸ್ತುವಾರಿ ಸಹಿತ ಮಹತ್ತರ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು.
ಇದೀಗ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿರುವ ಡಾ.ಸುಧೀರ್ಚಂದ್ರ ಸೂಡ ಹೋಂ ಕ್ವಾರಂಟೈನ್ಗೆ ತೆರಳಿದ್ದಾರೆ.