ಮಂಗಳೂರು, ಏ 23: ಕಾಂಗ್ರೆಸ್ ಪಕ್ಷದ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮೊಯ್ದೀನ್ ಬಾವ ನಾಮ ಪತ್ರ ಸಲ್ಲಿಸಿದರು.
ಉರ್ವಾ ಮೈದಾನದಿಂದ ಮಹಾನಗರ ಪಾಲಿಕೆ ಕಚೇರಿಯವರೆಗೂ ಮೊಯ್ದೀನ್ ಬಾವಾ ಸೈಕಲ್ ಮೂಲಕ ತೆರಳಿ, ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಉರ್ವಾ ಮೈದಾನದಲ್ಲಿ ಶಾಸಕ ಬಾವ ಮಾಡಿದ ಅಭಿವೃದ್ಧಿ ಕಾರ್ಯವನ್ನು ಮತ್ತು ಸಿದ್ದರಾಮಯ್ಯ ಸರಕಾರದ ಅಭಿವೃದ್ಧಿ ಕಾರ್ಯವನ್ನು ಕಾರ್ಯಕರ್ತರಿಗೆ ದೇವಿ ಪ್ರಸಾದ್ ಶೆಟ್ಟಿ ವಿವರಿಸಿದ್ದಾರೆ. ಮಾತ್ರವಲ್ಲ, ಶಾಸಕ ಬಾವ ನಾಮ ಪತ್ರ ಸಲ್ಲಿಕೆ ಹಿನ್ನಲೆ, ತಮ್ಮ ಕ್ಷೇತ್ರದ ದೇವಾಲಯ, ಚರ್ಚ್, ಮಸೀದಿಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಆಶೀರ್ವಾದ ಪಡೆದಿದ್ದಾರೆ.