ಮಂಗಳೂರು, ಆ. 06 (DaijiworldNews/SM): ತಲಕಾವೇರಿಯಲ್ಲಿ ಗುಡ್ಡ ಜರಿದು ನಾಪತ್ತೆಯಾದ ನಾಲ್ವರ ಪೈಕಿ ಒಬ್ಬರು ಬಂಟ್ವಾಳ ತಾಳೂಕಿನ ಕಳ್ಳಿಗೆ ಗ್ರಾಮದ ಕನಪಾಡಿ ನಿವಾಸಿ ಎಂದು ಮಾಹಿತಿ ಲಭ್ಯವಾಗಿದೆ. ರಾಮಕೃಷ್ಣ ರೇಣುಕಾ ಭಟ್ (ಅಪ್ಪು ಭಟ್) ದಂಪತಿ ಯ ಪುತ್ರ ರವಿಕಿರಣ್(23) ನಾಪತ್ತೆಯಾದವರು ಎಂದು ತಿಳಿದುಬಂದಿದೆ.

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಗುರುವಾರ ಬೆಳಿಗ್ಗೆ ತಲಕಾವೇರಿಯಲ್ಲಿ ಗುಡ್ಡ ಜರಿದು ಬಿದ್ದ ಹಿನ್ನೆಲೆಯಲ್ಲಿ ಆರ್ಚಕರ ಮನೆ ಸಂಪೂರ್ಣ ಜಲಸಮಾದಿಯಾಗಿತ್ತು. ಮನೆಯೊಳಗೆ ಇದ್ದ ಎಲ್ಲರೂ ನಾಪತ್ತೆಯಾಗಿದ್ದರು. ನಾಪತ್ತೆಯಾದವರಲ್ಲಿ ಬಂಟ್ವಾಳ ಮೂಲದ ರವಿಕಿರಣ್ ಕೂಡ ಒರ್ವರಾಗಿದ್ದಾರೆ.
ಲಾಕ್ ಡೌನ್ ಬಳಿಕ ಇವರನ್ನು ತಲಕಾವೇರಿಯಲ್ಲಿ ಅಲ್ಲಿನ ಆರ್ಚಕರು ಕರೆದ ಹಿನ್ನೆಲೆಯಲ್ಲಿ ಊರಿಗೆ ಆಗಮಿಸಿದರವರು ವಾಪಾಸು ಹೋಗಿದ್ದರು. ಅಪ್ಪಣ್ಣ ಭಟ್ ಅವರಿಗೆ ರವಿಕಿರಣ್ ಹಾಗೂ ಶಶಿಕಿರಣ್ ಎಂಬ ಇಬ್ಬರು ಪುತ್ರರು. ಇವರಲ್ಲಿ ದೊಡ್ಡ ಮಗ ರವಿಕಿರಣ್.