ಕಾಸರಗೋಡು, ಆ. 06 (DaijiworldNews/SM): ಕೊಡಗು ಕಾವೇರಿಯ ಮೂಲಸ್ಥಾನ ತಲಕಾವೇರಿಯಲ್ಲಿರುವ ಬ್ರಹ್ಮಗಿರಿಬೆಟ್ಟ ಕುಸಿದ ಪರಿಣಾಮ ನಾಪತ್ತೆಯಾದರವರಲ್ಲಿ ಒಬ್ಬರು ಬಂಟ್ವಾಳ ಹಾಗೂ ಮತ್ತೊಬ್ಬರು ಕಾಸರಗೋಡು ಮೂಲದವರಾಗಿದ್ದಾರೆ.


ಕಾಸರಗೋಡು ಅಡೂರು ನಿವಾಸಿ ಒಳಗೊಂಡಿದ್ದು, ನಾಪತ್ತೆಯಾದ ಸಹಾಯಕ ಅರ್ಚಕರಲ್ಲಿ ಅಡೂರು ಕಾಯರ್ತಿಮೂಲೆ ಶ್ರೀನಿವಾಸ ಪಡ್ಡಿಲ್ಲಾಯ(33) ಸೇರಿದ್ದಾರೆ. ಶ್ರೀನಿವಾಸ ಪಡ್ಡಿಲ್ಲಾಯ ಅಡೂರು ನಿವಾಸಿಯಾಗಿದ್ದು ಸಹಾಯಕ ಅರ್ಚಕರಾಗಿ ತಲಕಾವೇರಿಯಲ್ಲಿ ಉಳಕೊಂಡಿದ್ದರು. ಲಾಕ್ ಡೌನ್ ಹಿನ್ನೆಲೆಯಲ್ಲಿ ಊರಿನಲ್ಲಿದ್ದ ಅವರು ಎರಡು ವಾರಗಳ ಹಿಂದೆ ಲಾಕ್ ಡೌನ್ ಸಡಿಲಿಕೆಯ ಸಂದರ್ಭ ಮರಳಿ ತಲಕಾವೇರಿಗೆ ತೆರಳಿದ್ದರು.
ಮತ್ತೊಬ್ಬರು ಬಂಟ್ವಾಳ ಮೂಲದವರಾಗಿದ್ದು, ರಾಮಕೃಷ್ಣ ರೇಣುಕಾ ಭಟ್ (ಅಪ್ಪು ಭಟ್) ದಂಪತಿ ಯ ಪುತ್ರ ರವಿಕಿರಣ್(23) ನಾಪತ್ತೆಯಾದವರು ಎಂದು ತಿಳಿದುಬಂದಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಗುರುವಾರ ಬೆಳಿಗ್ಗೆ ತಲಕಾವೇರಿಯಲ್ಲಿ ಗುಡ್ಡ ಜರಿದು ಬಿದ್ದ ಹಿನ್ನೆಲೆಯಲ್ಲಿ ಆರ್ಚಕರ ಮನೆ ಸಂಪೂರ್ಣ ಜಲಸಮಾದಿಯಾಗಿದೆ.
ಘಟನೆಯಲ್ಲಿ ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್.ನಾರಾಯಣ ಆಚಾರ್, ಅವರ ಪತ್ನಿ ಹಾಗೂ ಜೊತೆಗಿದ್ದ ಸಹಾಯಕ ಅರ್ಚಕರಾದ ಮೂವರು ನಾಪತ್ತೆಯಾಗಿರುವುದಾಗಿ ಶಂಕಿಸಲಾಗಿದೆ.