ಪುತ್ತೂರು, ಆ 07 (DaijiworldNews/PY): ಸ್ಕೂಟರ್ನಲ್ಲಿ ಗಾಂಜಾ ತಂದು ಮಾರಾಟ ಮಾಡಲು ಯತ್ನಿಸಿದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ಕಬಕದಲ್ಲಿ ನಡೆದಿದೆ.

ಆರೋಪಿಯನ್ನು ಪುತ್ತೂರು ತಾಲೂಕಿನ ಕಬಕ ನಿವಾಸಿ ರಫೀಖ್ ಯಾನೆ ಗುಜುರಿ ಮುನ್ನಾ(39) ಎನ್ನಲಾಗಿದೆ.
ಆರೋಪಿಯು ಕಬಕ ಗ್ರಾಮದ ವಿದ್ಯಾಪುರ ರೈಲ್ವೇ ಬ್ರಿಡ್ಜ್ ಸಮೀಪ ಸ್ಕೂಟರ್ನಲ್ಲಿ ಗಾಂಜಾ ತಂದಿದ್ದು ಮಾರಾಟ ಮಾಡಲು ಯತ್ನಿಸಿದ್ದ. ಈ ಬಗ್ಗೆ ಖಚಿತ ಮಾಹಿತಿ ತಿಳಿದ ನಗರ ಠಾಣೆಯ ಎಸ್ಐ ಜಂಬುರಾಜ್ ಮಹಾರಾಜನ್ ನೇತೃತ್ವದ ತಂಡ ದಾಳಿ ನಡೆಸಿದ್ದಾರೆ.
ಆರೋಪಿ ಹಾಗೂ ಆತನಿಂದ ಸುಮಾರು 21 ಸಾವಿರ ಮೌಲ್ಯದ 1.70 ಕಿಲೋ ಗಾಂಜಾ, 2000 ರೂ, 1 ಸಾವಿರ. ರೂ. ಮೌಲ್ಯದ ಮೊಬೈಲ್, 35 ಸಾವಿರ. ರೂ. ಮೌಲ್ಯದ ಸ್ಕೂಟರ್ ಅನ್ನು ಪೊಲೀಸರು ವಶಪಡೆದುಕೊಂಡಿದ್ದಾರೆ.