ಮಂಗಳೂರು, ಆ. 07 (DaijiworldNews/SM): ದ.ಕ. ಜಿಲ್ಲೆಯಲ್ಲಿ ಶುಕ್ರವಾರದಂದು ಪತ್ತೆಯಾದ ಸೋಂಕಿತರಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಶುಕ್ರವಾರದಂದು ಜಿಲ್ಲೆಯಲ್ಲಿ 166 ಮಂದಿಯಲ್ಲಿ ಸೊಂಕು ಪತ್ತೆಯಾಗಿದೆ. ಆದರೆ, 188 ಮಂದಿ ಕೊರೊನಾ ಮುಕ್ತರಾಗಿದ್ದಾರೆ.

ಶುಕ್ರವಾರದಂದು ಪತ್ತೆಯಾದ ಸೋಂಕಿತರ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 6881ಕ್ಕೆ ಏರಿಕೆಯಾಗಿದೆ. ಈ ಪೈಕಿ 3304 ಮಂದಿ ಇಲ್ಲಿಯ ತನಕ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಸದ್ಯ 3369 ಮಂದಿ ಆಸ್ಪತ್ರೆಗಳಲ್ಲಿ ಹಾಗೂ ಹೋಂ ಐಸೋಲೇಷನ್ ಮೂಲಕ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಶುಕ್ರವಾರದಂದು ಮತ್ತೆ ಏಳು ಮಂದಿ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಇಲ್ಲಿಯ ತನಕ ಒಟ್ಟು 208 ಮಂದಿ ಸಾವನ್ನಪ್ಪಿದ್ದಾರೆ. ಇಂದು ಪತ್ತೆಯಾದ ಪ್ರಕರಣಗಳ ಪೈಕಿ 53 ಐಎಲ್ ಐ ಪ್ರಕರಣಗಳಾಗಿವೆ. 13 ಸಾರಿ ಪ್ರಕರಣಗಳಾಗಿವೆ. 19 ಮಂದಿಯಲ್ಲಿ ಪ್ರಾಥಮಿಕ ಸಂಪರ್ಕದಿಂದ ಸೋಂಕು ಪತ್ತೆಯಾಗಿದೆ. 51 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.