ಕಾರ್ಕಳ, ಆ 08 (DaijiworldNews/PY): ಟಿಪ್ಪರ್ ಲಾರಿಯೊಂದು ನೀರಿನ ಹೊಂಡಕ್ಕೆ ಮಗುಚಿ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿರು ಘಟನೆ ಪಳ್ಳಿ ಬಳಿಯ ನಿಂಜೂರು ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಕುಕ್ಕಂದೂರು ಗಣಿತ ನಗರ ನಿವಾಸಿ ಅರುಣ್ ಕುಮಾರ್ (40) ಹಾಗೂ 20 ವರ್ಷದ ಕ್ಲೀನರ್ ಮೃತಪಟ್ಟವರು.
ಟಿಪ್ಪರ್ ನಿಟ್ಟೂರು ಬಳಿ ತೆರಳುತ್ತಿದ್ದ ಸಂದರ್ಭ ಆಯ ತಪ್ಪಿ ರಸ್ತೆ ಪಕ್ಕದಲ್ಲಿದ್ದ ನೀರಿನ ಹೊಂಡಕ್ಕೆ ಮಗುಚಿ ಬಿದ್ದಿದೆ. ಪರಿಣಾಮ ಟಿಪ್ಪರ್ ಒಳಗಡೆ ಇದ್ದ ಇಬ್ಬರು ಹೊರಬರಲಾಗದೇ ಸಾವನ್ನಪ್ಪಿದ್ದಾರೆ.
ಟಿಪ್ಪರ್ ಬೈಯೂರು ಜಾರ್ಕಲಾದ ಸುಧಾಕರ್ ಎಂಬವರಿಗೆ ಸೇರಿದ್ದು ಎನ್ನಲಾಗಿದೆ.
ಘಟನೆಯ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.