ಉಡುಪಿ, ಆ. 08 (DaijiworldNews/MB) : ಇತ್ತೀಚೆಗೆ ಸಿಡಿಲು ಬಡಿತದಿಂದ ಮೃತಪಟ್ಟ ಉಡುಪಿ ನಗರದ ಕೊಡವೂರು ವಾರ್ಡ್ ನಿವಾಸಿ ಗೌತಮ್ ಕುಟುಂಬಕ್ಕೆ ಶಾಸಕರಾದ ಕೆ ರಘುಪತಿ ಭಟ್ ರವರು ಪ್ರಾಕೃತಿಕ ವಿಕೋಪ ನಿಧಿಯಡಿ ಮಂಜೂರಾದ ರೂ. 5 ಲಕ್ಷ ಮೊತ್ತದ ಚೆಕ್ ನೀಡಿದರು.

ಮೃತರ ಕುಟುಂಬಕ್ಕೆ ಪ್ರಾಕೃತಿಕ ವಿಕೋಪ ನಿಧಿಯಡಿ ಪರಿಹಾರ ನೀಡುವಂತೆ ಶಾಸಕ ರಘುಪತಿ ಭಟ್ ಶಿಫಾರಸು ಮಾಡಿರುತ್ತಾರೆ. ಅದರಂತೆ ಪ್ರಾಕೃತಿಕ ವಿಕೋಪ ನಿಧಿಯಡಿ ಮಂಜೂರಾದ ರೂ. 5 ಲಕ್ಷ ಮೊತ್ತದ ಚೆಕ್ ಶನಿವಾರ ಅಗಸ್ಟ್ ೮ ರಂದು ಶಾಸಕರಾದ ಕೆ ರಘುಪತಿ ಭಟ್ ರವರು ಗೌತಮ್ ಮನೆಗೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ನೀಡಿದರು.
ಈ ಸಂದರ್ಭದಲ್ಲಿ ಉಡುಪಿ ತಹಶೀಲ್ದಾರರಾದ ಪ್ರದೀಪ್ ಕುರ್ಡೆಕರ್, ಪೋಲಿಸ್ ಉಪ ಅಧೀಕ್ಷಕರಾದ ಜೈಶಂಕರ್, ಮಲ್ಪೆ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ತಿಮ್ಮೇಶ್ ಉಪಸ್ಥಿತರಿದ್ದರು.