ಕಾಸರಗೋಡು, ಆ. 08 (DaijiworldNews/MB) : ದುರಸ್ತಿ ಸಂದರ್ಭದಲ್ಲಿ ವಿದ್ಯುತ್ ಶಾಕ್ ತಗಲಿ ಕೆಎಸ್ಇಬಿ ನೌಕರ ಮೃತಪಟ್ಟ ದಾರುಣ ಘಟನೆ ಇಂದು ಮಧ್ಯಾಹ್ನ ಸೀತಾಂಗೋಳಿ ಬಳಿಯ ಸೂರಂಬೈಲ್ ಎಂಬಲ್ಲಿ ಘಟನೆ ನಡೆದಿದೆ.

ವಿದ್ಯಾನಗರ ಉದಯಗಿರಿಯ ಪ್ರದೀಪ್( 40) ಮೃತಪಟ್ಟವರು.
ಕಡಿದು ಬಿದ್ದಿದ್ದ ತಂತಿಯನ್ನು ದುರಸ್ತಿಗೊಳಿಸುತ್ತಿದ್ದಾಗ ಈ ಘಟನೆ ನಡೆದಿದೆ. ಜೊತೆಗಿದ್ದವರು ಕೂಡಲೇ ಕಾಸರಗೋಡು ಆಸ್ಪತ್ರೆಗೆ ತಲಪಿದರೂ ಜೀವ ಉಳಿಸಲಾಗಲಿಲ್ಲ.