ಮಂಗಳೂರು, ಆ. 08 (DaijiworldNews/MB) : 90 ವರ್ಷ ಪ್ರಾಯದ ಫಾ. ಮೌರಿಸ್ ಎಫ್ ಡಿಸೋಜ ಅವರು ಆಗಸ್ಟ್ 8 ರ ಶನಿವಾರ ನಿಧನರಾಗಿದ್ದಾರೆ.

ವಂಗತ ಸಂತಾನ್ ಡಿಸೋಜ ಹಾಗೂ ದಿವಂಗತ ಕೋಸೆಸ್ ಸೆರಾ ಅವರ ಪುತ್ರರಾದ ಮೌರಿಸ್ ಎಫ್ ಡಿಸೋಜರವರು, 1930 ರ ಏಪ್ರಿಲ್ 29ರಂದು ಬೋಲ್ಕುಂಜೆಯಲ್ಲಿ ಜನಿಸಿದರು. ಮಾರ್ಚ್ 1, 1958 ರಂದು ಮಂಗಳೂರು ಪ್ರಾಂತ್ಯದ ಅರ್ಚಕರಾಗಿ ನೇಮಕಗೊಂಡರು.
ಕಾರ್ಕಳ, ವೇಲೆನ್ಸಿಯಾ, ಕಲ್ಯಾಣ್ ಪುರ್ ಮಿಲಾಗ್ರಿಸ್, ಮಿಲಾಗ್ರೆಸ್ ಮಂಗಳೂರುನಲ್ಲಿ ಸಹಾಯಕ ಪ್ಯಾರಿಷ್ ಪಾದ್ರಿಯಾಗಿ ಸೇವೆ ಸಲ್ಲಿಸಿದರು. ನೀರುಮಾರ್ಗ, ಅಗ್ರಾರ್, ಉಳ್ಳಾಲ ಪನೀರ್, ಪೆಜಾರ್ ಮತ್ತು ಕೂಳೂರಿನಲ್ಲಿ ಪಾದ್ರಿಯಾಗಿ ಸೇವೆ ಸಲ್ಲಿಸಿದರು.
2005 ರಲ್ಲಿ ನಿವೃತ್ತಿಯಾದ ನಂತರ, 2005 ರಿಂದ 2007 ರವರೆಗೆ ವಿಯಾನಿ ನಿವಾಸದಲ್ಲಿ ವಾಸವಿದ್ದರು.
ಅವರ ಪಾರ್ಥಿವ ಶರೀರವನ್ನು ಆಗಸ್ಟ್ 9 ರ ಭಾನುವಾರ ಮಧ್ಯಾಹ್ನ 2 ಗಂಟೆಗೆ ಜೆಪ್ಪುವಿನ ಸೇಂಟ್ ಝೋಸ್ ವಾಝ್ ನಿವಾಸಕ್ಕೆ ತರಲಾಗುವುದು. ಸಂಜೆ 4 ಗಂಟೆಗೆ ವೇಲೆನ್ಸಿಯಾದ ಸೇಂಟ್ ವಿನ್ಸೆಂಟ್ ಫೆರರ್ ಚರ್ಚ್ನಲ್ಲಿ ಅಂತ್ಯ ಸಂಸ್ಕಾರದ ಸಾಮೂಹಿಕ ಪ್ರಾರ್ಥನೆ ನಡೆಯಲಿದ್ದು ಬಳಿಕ ವೇಲೆನ್ಸಿಯಾದ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.