ಕಾಸರಗೋಡು, ಆ. 08 (DaijiworldNews/MB) : ಕೆಲ ದಿನಗಳಿಂದ ನಾಪತ್ತೆಯಾಗಿದ್ದ ವೃದ್ಧೆಯ ಮೃತದೇಹ ಚೈತ್ರವಾಹಿನಿ ನದಿಯಲ್ಲಿ ಕೊನ್ನಕ್ಕಾಡ್ ಪಳ್ಳಿ ಬಳಿ ಶನಿವಾರ ಪತ್ತೆಯಾಗಿದೆ.

ಕೊನ್ನಕ್ಕಾಡ್ ಪಳ್ಳಿ ಕವಿಲತ್ತುಮ್ಮ(80) ಎಂಬವರ ಮೃತದೇಹ ಈ ರೀತಿ ಪತ್ತೆಯಾಗಿದೆ. ಆ.3ರಿಂದ ಅವರು ನಾಪತ್ತೆಯಾಗಿದ್ದರು.
ಆಗಸ್ಟ್ 3ರಂದು ಬೆಳಗ್ಗೆ 4 ಗಂಟೆಯ ನಂತರ ಪತ್ತೆಯಾಗಿರಲಿಲ್ಲ. ಮನೆಯ ಬಳಿಯ ಹಿನ್ನೀರಿನಲ್ಲಿ ಅವರ ಬಟ್ಟೆ ಪತ್ತೆಯಾಗಿದ್ದು, ನೆರೆಗೆ ಸಿಲುಕಿ ಕೊಚ್ಚಿ ಹೋಗಿರಬೇಕು ಎಂದು ಪೊಲೀಸರು ಶಂಕಿಸಲಾಗಿದೆ.