ಉಡುಪಿ, ಏ 24 : ಬಹುಕೋಟಿ ಉದ್ಯಮಿ ಬಾಸ್ಕರ ಶೆಟ್ಟಿಯವರ ಕೊಲೆ ಪ್ರಕರಣದ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ.
ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆಗೆ ಇರುವ 36 ಪ್ರಮುಖ ಸಾಕ್ಷಿಗಳ ಪ್ರಮುಖ ಸಾಕ್ಷಿಗಳ ವಿಚಾರಣೆ ಶೀಘ್ರವಾಗಿ ನಡೆಸಿದ ಅನಂತರದಲ್ಲಿ ರಾಜೇಶ್ವರಿಯನ್ನು ಜೈಲಿನಿಂದ ಬಿಡುಗಡೆಗೊಳಿಸಬಹುದು ಎನ್ನುವ ಷರತ್ತುನ್ನು ಸುಪ್ರೀಂ ಕೋರ್ಟ್ ವಿಧಿಸಿದೆ.
ವಿಚಾರಣೆಗೆ ಹಲವು ಸಮಯ ತಗಲುವ ಕಾರಣ ಜಾಮೀನು ಮಂಜೂರಾದರೂ ಸಧ್ಯಕ್ಕೆ ರಾಜೇಶ್ವರಿ ಜೈಲಿನಿಂದ ಬಿಡುಗಡೆ ಆಗುವುದಿಲ್ಲ. ವಿಚಾರಣೆಯಾದ ಬಳಿಕ ಅವರಿಗೆ ಬಿಡುಗಡೆಯಾಗಲಿದೆ.