ಉಡುಪಿ, ಆ. 08 (DaijiworldNews/MB) : ಉಡುಪಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹಲವಾರು ಪ್ರದೇಶಗಳಲ್ಲಿ ನೆರೆ ಕಾಣಿಸಿಕೊಂಡಿದೆ. ತಗ್ಗು ಪ್ರದೇಶದಲ್ಲಿನ ಜನತೆ ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ನೆರೆ ಕಾಣಿಸಿಕೊಂಡಿದ್ದು ನಿನ್ನೆ ಸ್ವಲ್ಪ ಮಳೆ ಕಡಿಮೆಯಾಗಿತ್ತು. ಇವತ್ತು ಬೆಳಿಗ್ಗೆಯಿಂದಲೇ ಸುರಿಯುತ್ತಿರುವ ಭಾರೀ ಮಳೆಯಿಂದ ಹಳ್ಳ-ತೊರೆಗಳು ತುಂಬಿ ಹರಿಯುತ್ತಿವೆ. ತಗ್ಗು ಪ್ರದೇಶಗಳಲ್ಲಿ ಇರುವ ಮನೆಗಳಿಗೆ ನೀರುವ ನುಗ್ಗುವ ಅಪಾಯವೂ ಎದುರಾಗಿದೆ.

































ಸೌಪರ್ಣಿಕ ನದಿ ತುಂಬಿ ಹರಿಯುತ್ತಿದ್ದು, ನಾವುಂದ ಕೆಳಬದಿ, ಬಡಾಕೆರೆ, ಅರೆಹೊಳೆ, ಚಿಕ್ಕಳ್ಳಿ, ಸಾಲ್ಬುಡ, ಕಡಿಕೆ, ನಾಡ, ಸೇನಾಪುರ, ಪಡುಕೋಣೆ ನದಿ ತುಂಬಿ ಹರಿಯುತ್ತಿದ್ದು ತಗ್ಗು ಪ್ರದೇಶಗಳು ಜಲಾವ್ರತವಾಗಿದ್ದು, ಜಾನುವಾರು ಕೊಟ್ಟಿಗೆಗಳಿಗೆ ನೀರು ನುಗ್ಗಿದೆ.
ಚಕ್ರಾ ನದಿಯೂ ಕೂಡಾ ತುಂಬಿ ಹರಿಯುತ್ತಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಕುಬ್ಜಾ ನದಿಯೂ ಕೂಡಾ ತುಂಬಿ ಹರಿಯುತ್ತಿದೆ. ಸೌಕೂರು, ಸಾರ್ಕಲ್ ಭಾಗದಲ್ಲಿ ತಗ್ಗು ಪ್ರದೇಶ ಜಲಾವ್ರತಗೊಂಡಿದೆ. ಹಾಲಾಡಿ ಹೊಳೆಯೂ ಕೂಡಾ ತುಂಬಿ ಹರಿಯುತ್ತಿದೆ.
ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮದ ಹೆರೈಬೆಟ್ಟು, ಕುದ್ರು ಬೆಟ್ಟು,ಎಂಬ ನೆರೆ ಬರುವ ಪ್ರದೇಶಗಳಿಗೆ ಬ್ರಹ್ಮಾವರ ತಹಶೀಲ್ದಾರರು ಭೇಟಿ ನೀಡಿ ಪರಿಶೀಲಿಸಿದರು. ಗದ್ದೆಯಲ್ಲಿ ನೀರು ತುಂಬಿದ್ದು ಯಾವುದೇ ಮನೆಗಳಿಗೆ ಹಾನಿ ಉಂಟಾಗಿಲ್ಲ. ನೀರು ತುಂಬಿರುವ ಪ್ರದೇಶಗಳಲ್ಲಿ ನೆಲೆಸಿರುವವರಿಗೆ ದೋಣಿ ವ್ಯವಸ್ಥೆ ಮಾಡಲಾಗಿದೆ.
ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದಲ್ಲಿ ನೆರೆ ಬರುವ ಪ್ರದೆಶವಾದ ಬೆಳ್ಮಾರು ಎಂಬಲ್ಲಿಗೆ ಬ್ರಹ್ಮಾವರ ತಹಶೀಲ್ದಾರರು ಭೇಟಿ ನೀಡಿ ಪರಿಶೀಲಿಸಿದರು. ಇಲ್ಲಿ ಮಡಿಸಾಲು ಹೊಳೆ ತುಂಬಿ ಹರಿಯುತ್ತಿದ್ದು ಅಕ್ಕ ಪಕ್ಕದ ಗದ್ದೆಗಳಲ್ಲಿ ನೀರು ತುಂಬಿದೆ. 6 ಮನೆಗಳು ಇದ್ದು ಈಗ ಇವರ ಮನೆಗೆ ನೆರೆ ಹಾನಿ ಉಂಟಾಗಿಲ್ಲ. ಮನೆಯಿಂದ 200 ಮೀಟರ್ ದೂರದಲ್ಲಿ ರಸ್ತೆ ಸಂಪರ್ಕವಿದ್ದು ಇವರಿಗೆ ದೋಣಿ ವ್ಯವಸ್ಥೆ ಮಾಡಲಾಗಿದೆ. ಇವರೆಲ್ಲರ ದೂರವಾಣಿ ನಂಬರ್ ಪಡೆದುಕೊಂಡಿದ್ದು ಯಾವುದೇ ಸಮಸ್ಯೆ ಬಂದಲ್ಲಿ ದೂರವಾಣಿ ಮೂಲಕ ಮಾಹಿತಿ ನೀಡುವಂತೆ ತಿಳಿಸಿ ಬರಲಾಗಿದೆ.
ಬ್ರಹ್ಮಾವರ ತಾಲ್ಲೂಕಿನ ನೀಲಾವರ ಗ್ರಾಮದ ಸೀತಾನದಿ ಸಮೀಪ ನೆರೆ ಬರುವ ಪ್ರದೇಶವಾದ ಬಾವಲಿ ಕುದ್ರು ಎಂಬಲ್ಲಿಗೆ ಬ್ರಹ್ಮಾವರ ತಹಶೀಲ್ದಾರರು ಭೇಟಿ ನೀಡಿ ಪರಿಶೀಲಿಸಿದರು. ಇಲ್ಲಿ 6 ಮನೆಗಳಿದ್ದು ಈಗ ಇಲ್ಲಿ ನೆರೆ ಸಮಸ್ಯೆ ಇರುವುದಿಲ್ಲ. ಇವರುಗಳಿಗೆ ದೋಣಿ ವ್ಯವಸ್ಥೆ ಮಾಡಲಾಗಿದೆ.ಇವರೆಲ್ಲರ ದೂರವಾಣಿ ನಂಬರ್ ಪಡೆದುಕೊಂಡಿದ್ದು ಯಾವುದೇ ಸಮಸ್ಯೆ ಇದ್ದಲ್ಲಿ ದೂರವಾಣಿ ಮೂಲಕ ಮಾಹಿತಿ ನೀಡುವಂತೆ ತಿಳಿಸಿ ಬರಲಾಗಿದೆ.ನಂತರ ನೀಲಾವರ ಗ್ರಾಮದ ನಂದನ ಕುದ್ರು, ಸಾಹೇಬರ ಕುದ್ರು ಮತ್ತು ರಾಮನ ಕುದ್ರು ಎಂಬ ನೆರೆ ಬರುವ ಪ್ರದೇಶಗಳಿಗೆ ಭೇಟಿ ನೀಡಿದರು, ಇಲ್ಲಿ ಈಗ ನೆರೆ ಸಮಸ್ಯೆ ಇರುವುದಿಲ್ಲ. ಇಲ್ಲಿ ಸಹ ದೋಣಿ ವ್ಯವಸ್ಥೆ ಮಾಡಲಾಗಿದೆ.ಸಂಬಂಧಪಟ್ಟವರ ದೂರವಾಣಿ ನಂಬರ್ ಪಡೆದುಕೊಂಡಿದ್ದು,ಯಾವುದೇ ಸಮಸ್ಯೆ ಬಂದಲ್ಲಿ ದೂರವಾಣಿ ಮೂಲಕ ಮಾಹಿತಿ ನೀಡುವಂತೆ ತಿಳಿಸಿ ಬರಲಾಗಿದೆ.
ಬ್ರಹ್ಮಾವರ ತಾಲೂಕಿನ ಬೈಕಾಡಿ ಗ್ರಾಮದ ಹರ್ಮಾನ್ ಡಿಸೋಜ ಎಂಬವರು ದೂರವಾಣಿ ಮೂಲಕ ಸೊಂಟದ ತನಕ ನೀರು ಬಂದಿದೆ ಎಂದು ತಿಳಿಸಿದ್ದರು,ಬ್ರಹ್ಮಾವರ ತಹಶೀಲ್ದಾರರು ಇವರ ಮನೆ ಬಳಿ ಹೋಗಿ ಪರಿಶೀಲಿಸಲಾಗಿ ಗದ್ದೆಯಲ್ಲಿ ಮಳೆ ಬಂದು ನೀರು ತುಂಬಿರುವುದಾಗಿದೆ. ಪಾದ ಮುಳುಗುವಸ್ಟು ಮಾತ್ರ ನೀರು ಇದೆ. ಯಾವುದೇ ಸಮಸ್ಯೆ ಇರುವುದಿಲ್ಲ.ಇವರ ಪತ್ನಿ ಮನೆ 52 ಹೇರೂರು ಗ್ರಾಮದಲ್ಲಿದ್ದು,ಅಲ್ಲಿಗೆ ಹೋಗಿ ವಾಸ ಮಾಡುವಂತೆ ತಿಳಿಸಲಾಗಿದೆ.
ಬ್ರಹ್ಮಾವರ ತಾಲೂಕು ಕೋಟ ಹೋಬಳಿ ಕೋಡಿ ಗ್ರಾಮದಲ್ಲಿ ಕಡಲ ಕೊರತ ವೀಕ್ಷಣೆ ಮಾಡಲಾಯಿತು ಯಾವುದೇ ಸಮಸ್ಯ ಇರುವುದಿಲ್ಲ. ಸ್ಥಳೀಯರಿಗೆ ತಿಳಿಹೇಳಲಾಗಿದೆ. ಬ್ರಹ್ಮಾವರ ತಾಲೂಕು ಕೋಟ ಹೋಬಳಿ ಮಣೂರು ಗ್ರಾಮದಲ್ಲಿ ಕಡಲ ಕೊರತ ವೀಕ್ಷಣೆ ಮಾಡಲಾಯಿತು, ಸ್ವಲ್ಪ ರಸ್ತೆ ಹಾಳಾಗಿರುವುದು ಕಂಡು ಬರುತ್ತದೆ. ಸ್ಥಳೀಯರಿಗೆ ತಿಳಿಹೇಳಲಾಗಿದೆ.
ಬ್ರಹ್ಮಾವರ ತಾಲೂಕು ಕೋಟ ಹೋಬಳಿ ಶಿರಿಯಾರ ಗ್ರಾಮದ ಜನತಾ ಕಾಲೋನಿಯ ರಸ್ತೆಯಲ್ಲಿ ನೀರು ನಿಂತಿರುವ ಬಗ್ಗೆ ಸ್ಥಳ ಪರಿಶೀಲಿಸಲಾಯಿತು. ಹಾಗೂ ನೀರು ಸಾರಾಗವಾಗಿ ಹರಿದುಹೋಗುವಂತೆ ಮೋರಿ ನಿರ್ಮಿಸಲು ಪಂಚಾಯತ್ ಅಭಿವೃದ್ದಿ ಅಧಿಕಾರಿಗೆ ಸೂಚಿಸಲಾಯಿತು. ಬ್ರಹ್ಮಾವರ ತಾಲೂಕು ಕೋಟ ಹೋಬಳಿ ಶಿರಿಯಾರ ಗ್ರಾಮದಲ್ಲಿ ನೆರೆಬರುವ ಪ್ರದೇಶಕ್ಕೆ ಬೇಟಿ ನೀಡಲಾಯಿತು. ಮೂರು ಮನೆಯವರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಯಿತು.
ಜಿಲ್ಲೆಯಲ್ಲಿ ಇಂದು ಕೂಡ ಮಳೆಯ ಆರ್ಭಟ ಮುಂದುವರಿದಿದ್ದು ತಗ್ಗು ಪ್ರದೇಶದ ಜನತೆ ಕಂಗಾಲಾಗುವಂತಾಗಿದೆ. ಬ್ರಹ್ಮಾವರ ಸಮೀಪದ ಕೀಳಿಂಜೆ ನೆರೆ ಪೀಡಿತ ಪ್ರದೇಶದಲ್ಲಿ ಗಾಳಿ ಮಳೆ ನೆರೆ ಹಾವಳಿಯ ಜೊತೆಗೆ ಹೊಸ ಸಮಸ್ಯೆ ಹೈನುಗಾರರನ್ನು ಕಾಡುತ್ತಿದೆ. ಕಳೆದ ಕೆಲವು ದಿನಗಳಿಂದ ರಾತ್ರಿ ವೇಳೇ ಮಳೆಗಾಳಿಯ ರಭಸ ಜೋರಾದಾಗ ಗೋ ಕಳ್ಳತನ ಕೃತ್ಯಗಳು ನಡೆಯುತ್ತಿರುವುದು ಸ್ಥಳೀಯರ ನಿದ್ದೆಗೆಡಿಸಿದೆ. ಕೀಳಿಂಜೆಯ ನೆರೆ ಹಾವಳಿ ಪ್ರದೇಶದ ಕಾಡ್ಯಾ ಶೆಟ್ಟಿ ಎನ್ನು ಲವ ಹೈನು ಕೃಷಿಕರ ಮನೆಯ ಕೊಟ್ಟಿಗೆಗೆ ಗೋ ಕಳ್ಳರು ನುಗ್ಗಿ ಗರ್ಭಿಣಿ ದನವನ್ನು ಕದ್ದು ಕರೆದೊಯ್ಯಲಾಗದೆ ಬಿಟ್ಟು ಹೋದ ಘಟನೆ ಕೂಡ ನಡೆದಿದೆ. ಕಳೆದ ಕೆಲವು ವಾರಗಳಿಂದ ಇಂತಹ ಘಟನೆಗಳು ಮರುಕಳಿಸುತ್ತಿದ್ದು ಹೈನುಗಾರ ಕೃಷಿಕರು ಆತಂಕದ ನಡುವೆ ದಿನದೂಡುವಂತಾಗಿದೆ.