ಮಲ್ಪೆ, ಆ 09(DaijiworldNews/HR): ಮಲ್ಪೆ ಬಂದರಿನ ದುರ್ಗಾ ರಕ್ಷಾ ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಹಾಲಪ್ಪ ಚಂದ್ರು ಹರಿಕಾಂತ (48)ಎಂಬವರು ನಾಪತ್ತೆಯಾಗಿದ್ದಾರೆ.

ಅವರು ಭಟ್ಕಳದ ಚಂದ್ರ ಎಂಬುವವರ ಮಾಲಕತ್ವದ ದುರ್ಗಾ ರಕ್ಷಾ ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡಲು ಕುಮುಟಾದಿಂದ ಸಂಜೆ 4:00 ಗಂಟೆಗೆ ಮಲ್ಪೆಗೆ ಬಂದಿರುತ್ತಾರೆ. ಆ ಬಳಿಕ ಮಲ್ಪೆ ಬಂದರಿನ ಪಶ್ಚಿಮ ದಕ್ಕೆಯಲ್ಲಿ ಡೀಸೆಲ್ ಬಂಕ್ ಬಳಿ ಬ್ರಹ್ಮವೇಲು ಹರಿಕಾಂತ್ರ ಇವರು ಹಾಲಪ್ಪ ಚಂದ್ರು ಹರಿಕಾಂತರವನ್ನು ನಿಲ್ಲಿಸಿ ಬೋಟಿನ ಸಾಹುಕಾರರ ಬಳಿ ಮಾತನಾಡಿ ಬರಲು ಹೋಗಿದ್ದು ವಾಪಸ್ಸು 4:30 ಗಂಟೆಗೆ ಬಂದಾಗ ಹಾಲಪ್ಪ ಚಂದ್ರು ಹರಿಕಾಂತ ಡಿಸೆಲ್ ಬಂಕ್ ಬಳಿ ದಕ್ಕೆಯಲ್ಲಿ ಇರದೆ ನಾಪತ್ತೆಯಾಗಿದ್ದಾರೆ.
ಆತನ ಕೈಯಲ್ಲಿದ್ದ ಬಟ್ಟೆ ಕವರ್ ದಕ್ಕೆಯ ಬಳಿ ಇದ್ದು ಆತನನ್ನು ಮಲ್ಪೆ ಬಂದರಿನ ಪರಿಸರದಲ್ಲಿ ಹುಡುಕಾಡಿದರೂ ಸಿಕ್ಕಿರುವುದಿಲ್ಲ ಅಲ್ಲದೆ ಅತನ ಮೊಬೈಲ್ ಸಿಚ್ ಆಪ್ ಆಗಿರುತ್ತದೆ. ಹಾಲಪ್ಪ ಚಂದ್ರು ಹರಿಕಾಂತ ಸಂಬಂಧಿಕರ ಮನೆಗೂ ಕೂಡಾ ಹೋಗಿರುವುದಿಲ್ಲ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.