ಕಾಸರಗೋಡು, ಆ 09 (DaijiworldNews/PY): ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರ ಕಾರು ಚಾಲಕನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು , ಈ ಹಿನ್ನಲೆಯಲ್ಲಿ ಸಂಸದರು ಕ್ವಾರಂಟೈನ್ಗೆ ಒಳಗಾಗಿದ್ದಾರೆ.

ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿದೆ ಎನ್ನಲಾಗಿದೆ. ಸೋಂಕು ಹಿನ್ನಲೆಯಲ್ಲಿ ಸಂಸದರ ಕಚೇರಿ ತಾತ್ಕಾಲಿಕವಾಗಿ ಮುಚ್ಚಲಾಗಿದ್ದು , ಸಂಸದರ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.
ಕಳೆದ ದಿನ ಇಬ್ಬರೂ ಕೊರೊನಾ ತಪಾಸಣೆ ನಡೆಸಿದ್ದರು. ಆದರೆ ಸಂಸದರ ವರದಿ ನೆಗೆಟಿವ್ ಬಂದಿತ್ತು. ಇದೀಗ ಚಾಲಕನಿಗೆ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಸಂಸದರು ಕಾಞ೦ಗಾಡ್ನಲ್ಲಿರುವ ಮನೆಯಲ್ಲಿ ಕ್ವಾರಂಟೈನ್ಗೆ ಒಳಗಾಗಿದ್ದು, ಆರೋಗ್ಯ ಇಲಾಖೆ ಸೂಚಿಸಿದ್ದಲ್ಲಿ ಮತ್ತೆ ಕೊರೊನಾ ತಪಾಸಣೆ ನಡೆಸುವುದಾಗಿ ಸಂಸದರು ತಿಳಿಸಿದ್ದಾರೆ.