ಉಡುಪಿ, ಆ 09 (DaijiworldNews/PY): ಜಿಲ್ಲೆಯಲ್ಲಿಂದು 282 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 6201ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಈವರೆಗೆ 44.824 ಮಂದಿಯ ಗಂಟಲ ದ್ರವ ಮಾದರಿ ಪರೀಕ್ಷೆ ಮಾಡಲಾಗಿದೆ. ಈ ಪೈಕಿ 37,325 ಮಂದಿಯ ವರದಿ ನೆಗಟಿವ್ ಆದರೆ, 6,201 ಮಂದಿ ವರದಿ ಪಾಸಿಟಿವ್ ಆಗಿದೆ. 1,298 ಮಂದಿಯ ಪರೀಕ್ಷಾ ವರದಿ ಇನ್ನು ಬರಬೇಕಿದೆ.
ಭಾನುವಾರ ಉಡುಪಿ ತಾಲೂಕಿನ 152, ಕುಂದಾಪುರ ತಾಲೂಕಿನ 86, ಹಾಗೂ ಕಾರ್ಕಳ ತಾಲೂಕಿನ 43 ಮಂದಿಗೆ ಕೊರೊನಾ ದೃಢವಾಗಿದೆ. ಈ ಪೈಕಿ 77 ಮಂದಿಗೆ ಕೊರೊನಾ ಲಕ್ಷಣಗಳು ಪತ್ತೆಯಾಗಿದ್ದು, ಇನ್ನುಳಿದ 205 ಜನರಿಗೆ ಕೊರೊನಾದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.