ಬ್ರಹ್ಮಾವರ, ಆ. 10 (DaijiworldNews/MB) : ಉಪ್ಪೂರು ಗ್ರಾಮ ಪಂಚಾಯತ್ ನ ಗುಮಾಸ್ತೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಾದ ಘಟನೆ ಬ್ರಹ್ಮಾವರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಭವಾನಿ (47) ಉಪ್ಪೂರು ಗ್ರಾಮ ಪಂಚಾಯತ್, ಇವರು ಉಪ್ಪೂರು ಗ್ರಾಮ ಪಂಚಾಯತ್ ಕಛೇರಿಯಲ್ಲಿ ಗುಮಾಸ್ತೆ ಆಗಿ ಕರ್ತವ್ಯ 23 ವರ್ಷಗಳಿಂದ ನಿರ್ವಹಿಸುಕೊಂಡಿದ್ದು, ಪರಿಶಿಷ್ಟ ಜಾತಿಗೆ ಸೇರಿದವರಾಗಿರುತ್ತಾರೆ.
ದಿನಾಂಕ 31/07/2020 ರಂದು ಬೆಳಿಗ್ಗೆ ಸುಮಾರು 10:45 ಗಂಟೆಗೆ ಆರೋಪಿಯಾದ ಅಶ್ವಿನ್ ಪ್ರಸನ್ನ ರೋಚ್, ಕೊಳಲಗಿರಿ, ಉಪ್ಪೂರು ಗ್ರಾಮ ಇವರು ಗ್ರಾಮ ಪಂಚಾಯತ್ ಕಛೇರಿಗೆ ಬಂದು ಬಿಲ್ಲು ಕೇಳುವ ವಿಚಾರದಲ್ಲಿ ತಗಾದೆ ತೆಗೆದಾಗ ಭವಾನಿರವರು ಕಾಮಗಾರಿಯ ಬಗ್ಗೆ ಪ್ರತಿಕ್ರಿಯೆ ನೀಡಿರುತ್ತಾರೆ.
ಆಗ ಅಶ್ವಿನ್ ಪ್ರಸನ್ನ ಇವರು ಪರಿಶಿಷ್ಟ ಜಾತಿಯ ಮಹಿಳೆ ಎಂಬ ಕಾರಣಕ್ಕೆ ತಾತ್ಸಾರದಿಂದ ಅವರನ್ನು ಗುರಿಪಡಿಸಿ ಸಾರ್ವಜನಿಕವಾಗಿ ಬೈದು, ನಿಂದಿಸಿ ಸುಳ್ಳು ಆರೋಪ ಹೊರಿಸಿ ಅಪಮಾನಿಸುವ ಮೂಲಕ ಅನುಚಿತವಾಗಿ ವರ್ತಿಸಿದ್ದು, ಅಲ್ಲದೇ ಗ್ರಾಮ ಪಂಚಾಯತ್ ಮತ್ತು ಸಿಬ್ಬಂದಿಗಳನ್ನು ನಿಂದಿಸಿ, ಕರ್ತವ್ಯದಲ್ಲಿದ್ದಾಗ ಅಡ್ಡಿಪಡಿಸಿ, ಅಕ್ರಮವಾಗಿ ಮೊಬೈಲ್ ಕ್ಯಾಮರದಲ್ಲಿ ವಿಡಿಯೋ ಶೂಟಿಂಗ್ ಮಾಡಿ ಬಳಿಕ ಆ ದೃಶ್ಯಾವಳಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಮಾನಹಾನಿ ಮಾಡಿರುವುದಾಗಿದೆ. ಆರೋಪಿಯು ಬೈದು ಜೀವ ಬೆದರಿಕೆ ಒಡ್ಡಿರುವುದಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 124/2020 ಕಲಂ: 3(1)(r), 3(1)(s), 3(2)(v-a) SC/ST ACT & 353, 505(1)(C), 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.