ಮಂಗಳೂರು, ಆ 10 (Daijiworld News/MSP): ಕನ್ನಡ ತುಳು ಚಲನಚಿತ್ರ ,ರಂಗಭೂಮಿ ನಟ,ಪ್ರಾಸ ಸಾಹಿತಿ , ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಕಾರ್ಕಳ ಶೇಖರ ಭಂಡಾರಿ ಅವರು ಅನಾರೋಗ್ಯ ದಿಂದ ಆ.10 ರ ಸೋಮವಾರ ಮಂಗಳೂರಿನಲ್ಲಿ ನಿಧನರಾಗಿದ್ದಾರೆ.

ವಿಜಯಾ ಬ್ಯಾಂಕ್ ಮಾಜಿ ಉದ್ಯೋಗಿಯಾಗಿದ್ದ ಶೇಖರ ಭಂಡಾರಿ ಪ್ರಜೆಗಳು ಪ್ರಭುಗಳು, ಇಂದ್ರ ಧನುಷ್, ಸ್ವಲ್ಪ ಅಜೆಸ್ಟ್ ಮಾಡ್ಕೋಳಿ, ಏಕಾಂಗಿ, ಓ ನನ್ನ ನಲ್ಲೆ, ಲವ್, ಧರ್ಮಯೋಧರು, ನನ್ನ ತಂಗಿ, ಕೋಟಿ ಚೆನ್ನಯ್ಯ, ತಮಾಶೆಗಾಗಿ, ಐದೊಂದ್ಲ ಐದು ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಸಿನಿಮಾ ಮಾತ್ರವಲ್ಲದೆ ಕಿರುತೆರೆಯಲ್ಲಿ ಜೋಗುಳ, ಗುರುರಾಘವೇಂದ್ರ ವೈಭವ, ರಂಗೋಲಿ ಮುಂತಾದ ಧಾರವಾಹಿಗಳಲ್ಲಿ ಶೇಖರ ಭಂಡಾರಿ ಅವರು ಅಭಿನಯಿಸಿದ್ದರು.
ಭಂಡಾರಿ ಅವರ ಪತ್ನಿ ವಾರಿಜಾ ಶೇಖರ್, ಇಬ್ಬರು ಪುತ್ರಿಯರು ಕುಟುಂಬಸ್ಥರನ್ನು ಅಗಲಿದ್ದಾರೆ