ಕುಂದಾಪುರ, 10 (Daijiworld News/MSP): ಕುಂದಾಪುರ ನಗರ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಿಂದ ರಸ್ತೆ ಮಳೆಗೆ ಹೊಳೆಯಾಗುತ್ತಿದ್ದು, ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲದಿರುವುದರಿಂದ ಈ ರಸ್ತೆಯಲ್ಲಿ ವಾಹನ ಸಂಚರಿಸುವುದು ಕಷ್ಟ ಸಾಧ್ಯವಾಗುತ್ತದೆ.






ಹೆದ್ದಾರಿ ನಿರ್ಮಾಣದ ಅವಾಂತರದಿಂದ ಸೃಷ್ಟಿಯಾದ ಸಮಸ್ಯೆಗೆ ಜನ ಸಮಸ್ಯೆ ಅನುಭವಿಸುತ್ತಿದ್ದು ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಸಂಬಂಧಿತ ಅಧಿಕಾರಿಗಳನ್ನು ತೀವ್ರ ತರಾಟೆಗೆ ತಗೆದುಕೊಂಡರು. ತಕ್ಷಣವೇ ತುರ್ತು ದುರಸ್ತಿ ಕಾರ್ಯ ಆರಂಭಿಸಲಾಯಿತು. ಶಾಸಕರು ಖುದ್ದು ನಿಂತು ಸಮಸ್ಯೆ ಸರಿಪಡಿಸಿದರು. ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದಿರುವುದನ್ನು ಸರಿಪಡಿಸಿಲು ಸೂಚಿಸಿದರು.
ಚರಂಡಿಗಳಿಗೆ ಸಂಪರ್ಕ ಕಲ್ಪಿಸಲಾಯಿತು. ಬೆಳಿಗ್ಗೆಯಿಂದಲೇ ಶಾಸಕರು ಕುಂದಾಪುರ, ಬಸ್ರೂರು ಮೂರ್ಕೈ ಮೊದಲಾದ ಪ್ರದೇಶಗಳಲ್ಲಿ ಹೆದ್ದಾರಿಯಿಂದ ನೀರು ತುಂಬಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವ ಪ್ರದೇಶಗಳನ್ನು ಸರಿ ಪಡಿಸುವಲ್ಲಿ ತಾವೇ ನಿಂತು ಮಾರ್ಗದರ್ಶನ ನೀಡಿದರು