ಉಡುಪಿ, ಆ 10 (DaijiworldNews/PY): ರಾಜ್ಯದ ಗೃಹ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಆಗಸ್ಟ್ 11 ಹಾಗೂ 12 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಆಗಸ್ಟ್ 11 ರಂದು ಬೆಳಗ್ಗೆ 12.10ಕ್ಕೆ ಪಡುಬಿದ್ರಿಯಲ್ಲಿನ ಮಳೆಹಾನಿ ಪ್ರದೇಶಗಳಿಗೆ ಭೇಟಿ, ಮಧ್ಯಾಹ್ನ 1 ಘಂಟೆಗೆ ಕಾರ್ಕಳದಲ್ಲಿನ ಮಳೆಹಾನಿ ಪ್ರದೇಶಗಳಿಗೆ ಭೇಟಿ, ಮಧ್ಯಾಹ್ನ 3ಕ್ಕೆ ಹೆಬ್ರಿಯಲ್ಲಿನ ಮಳೆಹಾನಿ ಪ್ರದೇಶಗಳಿಗೆ ಭೇಟಿ ಹಾಗೂ 4.10ಕ್ಕೆ ಮರವಂತೆ- ಬೈಂದೂರು ತಾಲೂಕಿನ ಮಳೆಹಾನಿ ಪ್ರದೇಶಗಳಿಗೆ ಭೇಟಿ, 4.50 ಕ್ಕೆ ಕುಂದಾಪುರ ಮಳೆಹಾನಿ ಪ್ರದೇಶಗಳಿಗೆ ಭೇಟಿ, ನಂತರ ಸಂಜೆ 5.15ಕ್ಕೆ ಕೋಟ ಪೊಲಿಸ್ ಠಾಣೆ ಕಟ್ಟಡ ಉದ್ಘಾಟನೆ ಮಾಡಲಿದ್ದು, 5.45ಕ್ಕೆ ಬ್ರಹ್ಮಾವರ ತಾಲೂಕು ಉಪ್ಪೂರು ಗ್ರಾಮದ ಮನೆಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
ಸಂಜೆ 6.15ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಳೆ ಹಾನಿ ಕುರಿತು ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಉಡುಪಿಯಲ್ಲಿ ವಾಸ್ತವ್ಯ. ಆಗಸ್ಟ್ 12 ರಂದು ಬೆಳಗ್ಗೆ 9.30ಕ್ಕೆ ಮಂಗಳೂರಿಗೆ ತೆರಳುವರು.