ಉಡುಪಿ, ಆ. 10, (DaijiworldNews/SM): ಜಿಲ್ಲೆಯಲ್ಲಿ ಇಂದು 90 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೊಂಕಿತರ ಸಂಖ್ಯೆ 6291 ಕ್ಕೆ ಏರಿಕೆಯಾಗಿದೆ.

ಈ ನಡುವೆ ಇಂದು ಜಿಲ್ಲೆಯಲ್ಲಿ ಕೊರೊನಾ ಸೊಂಕಿನಿಂದ ಮೂವರು ಸಾವನ್ನಪ್ಪಿದ್ದಾರೆ. 62 ವರ್ಷದ ಮಹಿಳೆ, ಕುಂದಾಪುರದ 79 ವರ್ಷದ ಪುರುಷ, ಉಡುಪಿಯ 81 ವರ್ಷದ ವ್ಯಕ್ತಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 62 ಕ್ಕೆ ಏರಿಕೆಯಾಗಿದೆ.