ಸುಳ್ಯ, ಆ 11 (Daijiworld News/MSP): ಸುಳ್ಯ ತಾಲೂಕಿನ ನಿಂತಿಕಲ್ ಸಮೀಪದ ಕಲ್ಲೇರಿ ಬಳಿ ಆ.11 ರ ಮಂಗಳವಾರ ಭೀಕರ ದುರಂತ ಸಂಭವಿಸಿದೆ.

ಮೃತಪಟ್ಟವರನ್ನು ಮಂಡೆಕೋಲು ಗ್ರಾಮದ ಮೈತಡ್ಕ ತಿಮ್ಮಪ್ಪ ಗೌಡರ ಮಗ ಉಮೇಶ್ (45) ಎಂದು ಗುರುತಿಸಲಾಗಿದೆ. ಕಾರ್ಯ ನಿಮಿತ್ತ ಬೆಳ್ಳಂಬೆಳಗ್ಗೆ ಹೊರಟ ಬೈಕ್ ಸವಾರ ದುರಂತದಿಂದ ಬೈಕ್ ಸಮೇತ ಸಂಪೂರ್ಣ ಸುಟ್ಟು ಕರಕಲಾಗಿದ್ದಾರೆ.
ಇಂದು ಬೆಳಗ್ಗಿನ ಜಾವ ಐದೂವರೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ವಿದ್ಯುತ್ ಕಂಬದ ಇನ್ಸುಲೇಟರ್ ನಿಂದ ತಪ್ಪಿ ಬಿದ್ದ ವಿದ್ಯುತ್ ಲೈನ್ ಸ್ಪರ್ಶಿಸಿದ ಹಿನ್ನೆಲೆಯಲ್ಲಿ ಆ ದಾರಿಯಾಗಿ ಸಾಗುತ್ತಿದ್ದ ಬೈಕ್ ಸವಾರ ಜೀವಂತ ದಹನಗೊಂಡಿದ್ದಾರೆ ಎಂದು ತಿಳಿದುಬಂದಿದೆ.