ಕುಂದಾಪುರ, ಆ 11 (Daijiworld News/MSP): ಎಸ್.ಎಸ್ ಎಲ್.ಸಿ ಪರೀಕ್ಷೆಯಲ್ಲಿ ಕುಂದಾಪುರ ತಾಲೂಕು ಬಸ್ರೂರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರಾವ್ಯ ಎಸ್.ಮೊಗವೀರ 621 ಅಂಕಗಳನ್ನು ಗಳಿಸಿ ಸರಕಾರಿ ಪ್ರೌಢಶಾಲೆಗಳಲ್ಲಿ ಉಡುಪಿ ಜಿಲ್ಲೆಗೆ 2ನೇ ಸ್ಥಾನ ಪಡೆದಿದ್ದಾರೆ.ರಾಜ್ಯಕ್ಕೆ 5ನೇ ಸ್ಥಾನ ಪಡೆದಿದ್ದಾರೆ.

ಕನ್ನಡದಲ್ಲಿ 125, ಇಂಗ್ಲಿಷ್, ಹಿಂದಿ, ಸಮಾಜ ವಿಜ್ಞಾನದಲ್ಲಿ 100, ಗಣಿತ, ವಿಜ್ಞಾನದಲ್ಲಿ 98 ಅಂಕ ಗಳಿಸಿದ್ದಾರೆ. ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ತಲಾ 2 ಅಂಕ ಕಡಿಮೆಯಾಗಿದ್ದು ಮರು ಮೌಲ್ಯ ಮಾಪನಕ್ಕೆ ಸಲ್ಲಿಸಲಿದ್ದೇನೆ. ಮುಂದೆ ವಿಜ್ಞಾನ ವಿಷಯದಲ್ಲಿ ಅಧ್ಯಯನ ಮಾಡಿ, ವೈದ್ಯಳಾಗಬೇಕು ಎನ್ನುವ ಕನಸಿದೆ ಎನ್ನುತ್ತಾರೆ ಶ್ರಾವ್ಯ. ಬಳ್ಕೂರು ನಿವಾಸಿಯಾಗಿರುವ ಶ್ರಾವ್ಯ ಶೇಖರ ಮೊಗವೀರ ಮತ್ತು ಗುಲಾಬಿ ದಂಪತಿಗಳ ಪುತ್ರಿಯಾಗಿದ್ದಾರೆ.