ಉಡುಪಿ, ಆ 11 (DaijiworldNews/HR): ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಉಡುಪಿಗೆ ಆಗಮಿಸಿದ್ದು, ಪಡುಬಿದ್ರಿ ಸಮುದ್ರ ತೀರಕ್ಕೆ ಕಡಲು ಕೊರೆತ ವೀಕ್ಷಣೆಗೆಂದು ಬಂದಾಗ ಸಮುದ್ರ ಅಲೆಯಲ್ಲಿ ಅವರ ಚಪ್ಪಲಿ ಕೊಚ್ಚಿ ಹೋಗಿ, ಅವರ ಮೇಲೆ ಅಲೆ ಅಪ್ಪಳಿಸಿದ ಘಟನೆ ಇಂದು ನಡೆದಿದೆ.

ಉಡುಪಿಯ ನೆರೆಪೀಡಿತ ಪ್ರದೇಶಗಳ ಪ್ರವಾಸ ಕೈಗೊಂಡ ಸಂದರ್ಭ ಸಚಿವರು ಕಡಲ ಅಬ್ಬರ ನೋಡಲು ತೀರಕ್ಕೆ ಬಂದರು. ಆದರೆ ದೊಡ್ಡ ಅಲೆಯೊಂದು ಎರಗಿ ಬಂದಾಗ ಅವರು ಹಿಂದೆ ಸರಿದರೂ ಅವರ ಚಪ್ಪಲಿ ಕಾಲಿಂದ ತಪ್ಪಿ ಸಮುದ್ರ ಪಾಲಾಯ್ತು. ಅಲೆಯ ಸೆಳೆತಕ್ಕೆ ಸಿಲುಕಿದ ಸಚಿವರನ್ನು ಸನಿಹದಲ್ಲಿದ್ದ ಬಿಜೆಪಿ ನಾಯಕರು ಕೈಹಿಡಿದು ಆಸರೆಯಾದರು. ಸ್ವಲ್ಪ ಸಮಯದ ನಂತರ ಅಲೆಯೊಂದಿಗೆ ಚಪ್ಪಲಿ ದಡಕ್ಕೆ ಮರಳಿತು.
ಉಡುಪಿ ಜಿಲ್ಲೆ ಕಾಪು ತಾಲೂಕು ಪಡುಬಿದ್ರೆ ಕಡಲಕಿನಾರೆಗೆ ಬಸವರಾಜ್ ಬೊಮ್ಮಾಯಿ ಮೊದಲ ಭೇಟಿ ಕೊಟ್ತಿದ್ದಾರೆ ಇಂದು ಬಳಿಕ ಕಾರ್ಕಳ, ಹೆಬ್ರಿ, ಬೈಂದೂರು, ಕುಂದಾಪುರ, ಬ್ರಹ್ಮಾವರ ತಾಲೂಕಿನಲ್ಲಿ ನೆರೆ ಪ್ರವಾಸ ಮಾಡಲಿದ್ದಾರೆ.